Advertisement

ಸರಕಾರಿ ಸೌಲಭ್ಯ ತಲುಪಿಸುವ ಕಾರ್ಯ ಪ್ರಶಂಸನೀಯ

04:01 PM Mar 07, 2020 | Naveen |

ಸುರಪುರ: ಸರ್ಕಾರದ ಯೋಜನೆ ಜನರ ಮನೆ ಬಾಗಿಲಕ್ಕೆ ತಲುಪಿಸುವ ಕಾರ್ಯ ಪ್ರಶಂಸನೀಯವಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಜಡಿಮರಳ ಹೇಳಿದರು.

Advertisement

ನಗರಸಭೆ ವ್ಯಾಪ್ತಿಯ ಹಸನಾಪುರದಲ್ಲಿ ರಾಜುಗೌಡ ಗ್ರೌಂಡ್‌ ವರ್ಕ್‌ ಟೀಮ್‌ನಿಂದ ಹಮ್ಮಿಕೊಂಡಿದ್ದ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅರಿವಿನ ಕೊರತೆಯಿಂದ ಸರಿಯಾಗಿ ಬಳಸಿಕೊಳ್ಳಲಾಗುತ್ತಿಲ್ಲ ಎಂದರು.

ಜನರು ಆರೋಗ್ಯ ಸಮಸ್ಯೆಯಿಂದ ಸಾಕಷ್ಟು ತೊಂದರೆ ಎದುರಿಸುತ್ತಿರುವುದನ್ನು ಶಾಸಕ ರಾಜುಗೌಡ ಕಣ್ಣಾರೆ ಕಂಡಿದ್ದಾರೆ. ಹೀಗಾಗಿ ಜನರ ಸಮಸ್ಯೆ ಗಮನದಲ್ಲಿ ಇಟ್ಟುಕೊಂಡು ಈ ಅಭಿಯಾನಕ್ಕೆ ಮುಂದಾಗಿ ಆಯಷ್ಮಾನ್‌ ಆರೋಗ್ಯ ಕಾರ್ಡ್‌ಗಳನ್ನು ಉಚಿತವಾಗಿ ಮಾಡಿಸಿಕೊಡಲು ಮುಂದಾಗಿದ್ದಾರೆ ಎಂದು ಸ್ಮರಿಸಿದರು.

ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹಣಮಪ್ಪ ನಾಯಕ ತಾತಾ ಮಾತನಾಡಿ, ಯೋಜನೆಗಳನ್ನು ಜನರ ಮನೆ ಮನೆಗೆ ತಲುಪಿಸುವುದು ಶಾಸಕ ರಾಜುಗೌಡ ಅವರ ಉದ್ದೇಶವಾಗಿದೆ ಎಂದರು. ರಾಜುಗೌಡ ಗ್ರೌಂಡ್‌ ವರ್ಕ್‌ ಟೀಮ್‌ನಿಂದ ಆಯುಷ್ಮಾನ್‌ ಕಾರ್ಡ್‌ನೊಂದಿಗೆ ಸಂಧ್ಯಾ ಸುರಕ್ಷೆ, ವಿಧವಾ, ನಿರ್ಗತಿಕ, ಅಂಗವಿಕಲ ಸೇರಿದಂತೆ ವಿವಿಧ ಮಾಸಾಶಾಸನ ಮತ್ತು ಕಾರ್ಮಿಕ ಕಾರ್ಡ್‌, ಭಾಗ್ಯ ಲಕ್ಷ್ಮೀ ಬಾಂಡ್‌, ರೇಷನ್‌ ಕಾರ್ಡ್‌, ಬೆಳೆ ವಿಮೆ ಸೇರಿದಂತೆ 11 ಯೋಜನೆಗಳನ್ನು ಜನರ ಮನೆ ಬಾಗಿಲಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ರಾಜ್ಯದಲ್ಲಿಯೇ ಯಾವಬ್ಬ ಶಾಸಕರು ಮಾಡದ ಕೆಲಸವನ್ನು ಶಾಸಕ ರಾಜುಗೌಡ ಮಾಡುತ್ತಿದ್ದಾರೆ. ಆದ್ದರಿಂದ ಜನರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ರಾಜುಗೌಡ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಶಂಕರ ನಾಯಕ ಮಾತನಾಡಿ, ತಾಲೂಕಿನಲ್ಲಿ ಒಂದು ಲಕ್ಷ ಜನರಿಗೆ ಈ 11 ಯೋಜನೆಗಳನ್ನು ತಲುಪಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಮೊದಲ ಹಂತವಾಗಿ 80 ಸಾವಿರಕ್ಕೂ ಮೇಲ್ಪಟ್ಟು ಜನರಿಗೆ ಈ ಯೋಜನೆ ತಲುಪಿಸಲಾಗಿದೆ ಎಂದರು.

Advertisement

ಈ ವೇಳೆ 380 ಜನರಿಗೆ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ವಿತರಣೆ ಮಾಡಲಾಯಿತು.
ನಂತರ ರಾಜುಗೌಡ ಗ್ರೌಂಡ್‌ ವರ್ಕ ಟೀಮ್‌ ನಗರ ವ್ಯಾಪ್ತಿಯ ಮುಖ್ಯಸ್ಥ ಶರಣು ನಾಯಕ ಅಯ್ನಾಳಪ್ಪ ಹಾದಿಮನಿ, ಪವನ ಪಾಣಿಭಾತೆ, ಕಿಶನ್‌ ಟೊಣಪೆ ಸೇರಿದಂತೆ ಗ್ರೌಂಡ್‌ ವರ್ಕ್‌ ಟೀಮ್‌ನ ಬಳಗಕ್ಕೆ ಮತ್ತು ಭೂ ನ್ಯಾಯ ಮಂಡಳಿಯ ನೂತ ಸದಸ್ಯರಾಗಿ ನೇಮಕಗೊಂಡಿರುವ ಶಶಿಕಲಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಯಮನಪ್ಪ ಗಂಗನಾಳ, ಮಲ್ಕಯ್ಯ ತೇಲ್ಕರ್‌, ಹೊನ್ನಪ್ಪ ತಳವಾರ, ಅರವಿಂದ ಬಿಲ್ಲವ್‌, ಹಣಮೇಗೌಡ ಪಾಟೀಲ, ಮಹೇಶ ಉಲ್ಪನವರ್‌, ಶಿವಪ್ಪ ನಂಬಾ, ಬಾಲಕೃಷ್ಣ ಶಹಾಪುರ, ಅವಿನಾಶ ಅಮ್ಮಾಪುರ, ಸಿದ್ದು ಮರಕಲ್‌, ಪರುಶುರಾಮ ಶರಣು ಹೊಸಮನಿ, ಭಿಮರಾಗೌಡ ಬಿರೇದಾರ, ಮಲ್ಲಪ್ಪ ತಳವಾರ, ಕಿರಣ ಗಂಗನಾಳ, ಭೀಮರಾಯ ನಂಬಾ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next