Advertisement

ಸುರಪುರ: ಉಳಿತಾಯ ಬಜೆಟ್‌ ಮಂಡನೆ

04:10 PM Jan 19, 2018 | Team Udayavani |

ಸುರಪುರ: ಎಸ್‌ಎಚ್‌ ಖಾನಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಅಧ್ಯಕ್ಷತೆಯಲ್ಲಿ ಬುಧವಾರ 2018-19ನೇ ಸಾಲಿನ ಬಜೆಟ್‌ ಮಂಡನೆ ವಿಶೇಷ ಸಭೆ ಜರುಗಿತು.

Advertisement

ಸಭೆಯಲ್ಲಿ 1,97,69,000 ಉಳಿತಾಯ ಬಜೆಟ್‌ ಮಂಡಿಸಲಾಯಿತು. 2018-19ನೇ ಸಾಲಿನ ಸಾಮಾನ್ಯ ನಿಧಿ ಮತ್ತು ಖಾಯಂ ನಿಧಿ ಆಯವ್ಯಯ ಮುಂಗಡ ಪತ್ರದಲ್ಲಿ ವಿವಿಧ ಬಾಬತ್ತುಗಳಿಂದ ರೂ. 7,94,50,000 ಆದಾಯ ಹಾಗೂ ರೂ. 5,96, 81,000 ನಾನಾ ಶೀರ್ಷಿಕೆಯಡಿಯಲ್ಲಿ ವೆಚ್ಚ ಮಾಡುವುದ ಸೇರಿ ಒಟ್ಟು ರೂ. 1,97,69,000 ಗಳ ಉಳಿತಾಯಗಳ ಮುಂಗಡ ಪತ್ರಕ್ಕೆ ಸಭೆಯು ನಿರ್ಣಯ ಕೈಗೊಂಡಿತು.

2018-19ನೇ ಸಾಲಿನ ಕ್ರಿಯಾ ಯೋಜನೆಯಡಿ ವಿವಿಧ ಕಾಮಗಾರಿಗಳ ರೂ. 700 ಲಕ್ಷಗಳಿಗೆ ಅನುಮೋದನೆ ನೀಡಲಾಯಿತು. ಅಲ್ಲದೆ ಸಮಿತಿಯ 2016-17ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಲ್ಲಿನ 9 ಕಾಮಗಾರಿಗಳು ಮತ್ತು ಡಬ್ಲೂಐಎಫ್‌ ಯೋಜನೆಯಡಿ ಎಪಿಎಂಸಿ ಸಮಿತಿಯ ಸುರಪುರದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 1000 ಮೆಟ್ರಿಕ್‌ ಟನ್‌ 99 ಲಕ್ಷದ ಪ್ರಸ್ತಾವನೆ ಮಂಜೂರಾತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು. 

ಕಾರ್ಯದರ್ಶಿ ರಿಯಾಜುರ ರಹೆಮಾನ್‌, ಬಜೆಟ್‌ನ ವರದಿ ವಾಚನ ಮಾಡಿದರು. ಎಪಿಎಂಸಿ ಅಧ್ಯಕ್ಷ ನಿಂಗಣ್ಣ
ಬಾದ್ಯಾಪುರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜಶೇಖರ ದೇಸಾಯಿ, ಸದಸ್ಯರಾದ ಮಲ್ಲಿಕಾರ್ಜುನ, ಮಲ್ಲಣ್ಣ ಸಾಹುಕಾರ, ಅಮರೇಶ ಕಟ್ಟಿಮನಿ, ಸಣಕೆಪ್ಪ ಸಾಹುಕಾರ, ರಾಯಪ್ಪ, ನಾಗಣ್ಣ ದಂಡಿನ, ದುರಗಪ್ಪ ಗೋಗಿಕರ, ಸಂಗನಗೌಡ ಸೋಮನಗೌಡ, ದೇವಣ್ಣ ಮಲಗಲದಿನ್ನಿ, ಬಸವರಾಜ ಆರೆಶಂಕರ, ಗೋಪಾಲರಾವ್‌
ಮಾಳದಕರ, ರಂಗನಾಥ ಗುಡಗುಂಟಿ, ಬಸವರಾಜ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next