ಮುಡಿಪು: ಮುಡಿಪಿನ ಸೂರಜ್ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಡಿಸೆಂಬರ್ 21ರಿಂದ 23ರ ತನಕ ನಡೆ ಯಲಿರುವ ರಾಷ್ಟ್ರಮಟ್ಟದ ‘ಸೂರಜ್ ಕಲಾಸಿರಿ-2017’ರ ಸಾಂಸ್ಕೃತಿಕ ಕಲಾ ವೈಭವದ ಲಾಂಛನವನ್ನು ಶನಿವಾರ ಶಾಲಾ ಸಭಾಂಗಣದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಬಿಡುಗಡೆ ಮಾಡಿದರು.
ಸಂಸ್ಥೆಯ ಕನಸಿನ ಉತ್ಸವವಾಗಿರುವ ಕಲಾಸಿರಿ ನಮ್ಮ ನಾಡಿನ ಸಾಂಸ್ಕೃತಿಕ ಹಬ್ಬವಾಗಿ ಮೂಡಿಬರಲಿದ್ದು, ಈ ಹಬ್ಬದಲ್ಲಿ ಮುಖ್ಯಮಂತ್ರಿ ಭಾಗವಹಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾಸಿರಿಯಲ್ಲಿ ರಾಷ್ಟ್ರ ಮಟ್ಟದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ ಎಂದರು. ಸೂರಜ್ ಸಂಸ್ಥೆ ತನ್ನ 12ವರ್ಷದ ನೆನಪಿಗಾಗಿ 12 ಜನ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸಮ್ಮಾನಿಸಲಾಗುವುದು ಎಂದು ಹೇಳಿದರು.
ಹೇಮಲತಾ ಎಂ. ರೇವಣ್ಕ್ ರ್, ಆರ್ಥಿಕ ಸಮಿತಿಯ ಅಧ್ಯಕ್ಷೆ ಗೀತಾ ಉಚ್ಚಿಲ್, ಪ್ರಚಾರ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಪಿ. ಕರ್ಕೇರ, ಆರ್ಥಿಕ ಸಮಿತಿಯ ಉಪಾಧ್ಯಕ್ಷ ಪ್ರಶಾಂತ ಕಾಜವ, ಸಮಿತಿ ಸದಸ್ಯರಾದ ಅಬ್ದುಲ್ ಜಲೀಲ್ ಮೋಂಟುಗೋಳಿ, ಅಬ್ದುಲ್ ರಝಾಕ್ ಕುಕ್ಕಾಜೆ, ಸೀತಾರಾಮ ಶೆಟ್ಟಿ ಪಜೀರು, ಫ್ಲೋರಿನ್ ಡಿ’ಸೋಜಾ, ನಝೀರ್ ಮೊದ್ದಿನ್, ಪದ್ಮನಾಭ ನರಿಂಗಾನ, ತೋನ್ಸೆ ಪುಷ್ಕಳ ಕುಮಾರ್, ಕೇಶವ ಹೆಗಡೆ, ಡಾ| ಸುರೇಖ, ಮುರಳೀ ಧರ ಶೆಟ್ಟಿ ಮೋರ್ಲ, ಜನಾರ್ದನ ಕುಲಾಲ್, ಅಹಮ್ಮದ್ ಬಶೀರ್, ಸಮೀರ್ ಪಜೀರು, ಬಾದ್‌ಶ ಹಾಗೂ ವಿಕಾಸ್ ಮುಡಿಪು ಉಪಸ್ಥಿತರಿದ್ದರು. ಮಮತಾ ಗಟ್ಟಿ ಸ್ವಾಗತಿಸಿ, ಸೋಂದಾ ಲಕ್ಷ್ಮೀಶ ಹೆಗಡೆ ನಿರೂಪಿಸಿದರು.