Advertisement

ಫ್ರಿಡ್ಜ್ vs ಮಣ್ಣಿನ ಮಡಿಕೆ; ಬೇಸಿಗೆಯಲ್ಲಿ ವೈರಲ್ ಆದ ಆನಂದ್ ಮಹೀಂದ್ರಾ ಟ್ವೀಟ್

06:06 PM May 12, 2023 | Team Udayavani |

ಮುಂಬಯಿ :ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಮತ್ತೊಮ್ಮೆ ತಮ್ಮ ಹಾಸ್ಯದ ಟ್ವೀಟ್‌ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟ್ವಿಟರ್ ಮೂಲಕ ಹ್ಯಾಂಡಲ್ ಆಸಕ್ತಿದಾಯಕ ಮತ್ತು ವಿಶಿಷ್ಟವಾದ ಟ್ವೀಟ್‌ಗಳಿಂದ ಗಮನ ಸೆಳೆಯುವ ಆನಂದ್ ಮಹೀಂದ್ರಾ ಬೇಸಿಗೆಯಲಿನ ಸಕಾಲಿಕ ಟ್ವೀಟ್ ವೀಕ್ಷಕರ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ.

Advertisement

ಮಹೀಂದ್ರಾ ಅವರು ಭಾರತೀಯತೆಯ ವಿಷಯಗಳ ಅಪಾರ ಅಭಿಮಾನಿಯಾಗಿದ್ದು “ದೇಸಿ” ಚಳವಳಿಗೆ ತಮ್ಮ ಪ್ರೀತಿ ಮತ್ತು ಬೆಂಬಲವನ್ನು ಸದಾ ತೋರಿಸುತ್ತಾರೆ. ಬೇಸಿಗೆ ಕಾಲವಾಗಿರುವುದರಿಂದ, ಮಹೀಂದ್ರಾ ಅವರು “ಮಣ್ಣಿನ ಮಡಿಕೆ” ಮತ್ತು ಫ್ರಿಡ್ಜ್ ನಡುವಿನ ಲಘುವಾದ ವ್ಯತ್ಯಾಸವನ್ನು ಹಂಚಿಕೊಂಡಿದ್ದಾರೆ. ಮಣ್ಣಿನ ಮಡಿಕೆ ಬೇಸಿಗೆಯ ತಿಂಗಳುಗಳಲ್ಲಿ ನೀರನ್ನು ತಂಪಾಗಿರಿಸುತ್ತದೆ, ಹಾಗೆಯೇ ಅದರಿಂದ ಸೇವಿಸುವ ನೀರನ್ನು ಆರೋಗ್ಯಕರ ಮತ್ತು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.

“ನಿಜವಾಗಲೂ ವಿನ್ಯಾಸ ಮತ್ತು ಸೌಂದರ್ಯಶಾಸ್ತ್ರದ ದೃಷ್ಟಿಕೋನದಿಂದ ಮಣ್ಣಿನ ಮಡಿಕೆ ಕೂಡ ಉತ್ತಮವಾಗಿದೆ. ಪಾಸಿಟಿವ್ ಆಗಿರುವ ಜಗತ್ತಿನಲ್ಲಿ, ವಿನಮ್ರ ಮಣ್ಣಿನ ಮಡಿಕೆಯು ಪ್ರೀಮಿಯಂ ಜೀವನಶೈಲಿಯ ಪರಿಕರವಾಗಬಹುದು” ಎಂದು ಆನಂದ್ ಮಹೀಂದ್ರಾ ಅವರು ಮಣ್ಣಿನ ಮಡಿಕೆಯ ಸಾಧಕಗಳನ್ನು ಪಟ್ಟಿ ಮಾಡುವ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.

ಮಣ್ಣಿನ ಮಡಿಕೆಯು ಕೈಗೆಟುಕುವ, ಒಯ್ಯಬಲ್ಲ ಮತ್ತು ಫ್ರಿಜ್‌ಗಿಂತ ಹೆಚ್ಚು ಬಾಳಿಕೆ ಬರುವಂತಹದ್ದಾಗಿದೆ. ಮತ್ತೊಂದೆಡೆ, ರೆಫ್ರಿಜರೇಟರ್‌ನ ಬೆಲೆ 10,000 ರೂ, ಕೇವಲ 7 ರಿಂದ 15 ವರ್ಷಗಳವರೆಗೆ ಬಾಳಿಕೆ ಬರುತ್ತದೆ, ಹೆಚ್ಚಿನ ನಿರ್ವಹಣೆ, ವಿದ್ಯುತ್ ಬಳಸುತ್ತದೆ ಮತ್ತು ಪೋರ್ಟಬಲ್ ಅಲ್ಲ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next