Advertisement

ನಾವು ಶಿರ್ಡಿ,ಪಂಢರಪುರಕ್ಕೆ ಹೋದಂತೆ ಉದ್ಧವ್‌ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿದ್ದಾರೆ !

10:21 AM Mar 09, 2020 | sudhir |

ಮುಂಬಯಿ: ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಮಹಾವಿಕಾಸ್‌ ಆಘಾಡಿಯ ಇತರ ನಾಯಕರು ಅಯೋಧ್ಯೆಗೆ ಹೋಗಿರುವುದರಲ್ಲಿ ಏನು ತಪ್ಪಿದೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.

Advertisement

ಎನ್‌ಸಿಪಿಯ ಸಮಾವೇಶದ ಹಿನ್ನೆಲೆಯಲ್ಲಿ ಶನಿವಾರ ರಾಯಗಡಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಸಂಸದೆ ಸುಪ್ರಿಯಾ ಸುಳೆ ಅವರು, ನಾವೆಲ್ಲರೂ ಪಂಢರಪುರ ಅಥವಾ ಶಿರ್ಡಿಗೆ ಹೋಗುತ್ತೇವೆ ಎಂದರು. ಸಿಎಂ ಉದ್ಧವ್‌ಠಾಕ್ರೆ ಅವರ ಅಯೋಧ್ಯೆ ಭೇಟಿಯು ಮಹಾವಿಕಾಸ್‌ ಆಘಾಡಿಯ ಮೈತ್ರಿಯ ಮೇಲೆ ಪರಿಣಾಮ ಬೀರುವುದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುಪ್ರಿಯಾ ಸುಳೆ ನಾನು ಕೂಡ ಪ್ರತಿ ವರ್ಷ ಪಂಢರಪುರ, ಅಜ್ಮೀರ್, ಜೆಜುರಿಗೆ ಹೋಗುತ್ತೇನೆ. ಆದ್ದರಿಂದ ಉದ್ಧವ್‌ ಠಾಕ್ರೆ ಅವರು ಅಯೋಧ್ಯೆಗೆ ಹೋಗಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದರು. ಉದ್ಧವ್‌ ಠಾಕ್ರೆ ಅವರ ಅಯೋಧ್ಯೆಯ ಭೇಟಿ ರಾಜ್ಯದ ಮೈತ್ರಿ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ.

ಮುಖ್ಯಮಂತ್ರಿಯಾದ ನಂತರ ಉದ್ಧವ್‌ ಠಾಕ್ರೆ ಮೊದಲ ಬಾರಿಗೆ ಅಯೋಧ್ಯೆ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರು ರಾಮ ಮಂದಿರದ ನಿರ್ಮಾಣಕ್ಕೆ 1 ಕೋಟಿ ರೂ.ಗಳ ಅನುದಾನವನ್ನು ಘೋಷಿಸಿದರು. ಅಯೋಧ್ಯೆಯಲ್ಲಿ ಮಹಾರಾಷ್ಟ್ರ ಭವನ ನಿರ್ಮಿಸಲು ಉತ್ತರ ಪ್ರದೇಶ ಸರಕಾರ ಜಮೀನು ನೀಡಬೇಕು ಎಂದೂ ಅವರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next