Advertisement

ಸೆ.5ಕ್ಕೆ ಸುಪ್ರೀಂ ಆದೇಶ

12:41 AM Aug 30, 2019 | mahesh |

ನವದೆಹಲಿ: ಐಎನ್‌ಎಕ್ಸ್‌ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸೆ.5ಕ್ಕೆ ಆದೇಶ ನೀಡಲಾಗುತ್ತದೆ. ಅಲ್ಲಿಯ ವರೆಗೆ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸುಪ್ರೀಕೋರ್ಟ್‌ ಶುಕ್ರವಾರ ತಿಳಿಸಿದೆ. ನ್ಯಾ.ಆರ್‌.ಭಾನುಮತಿ ಮತ್ತು ನ್ಯಾ.ಎ.ಎಸ್‌.ಬೋಪಣ್ಣ ನೇತೃತ್ವದ ಪೀಠ ಮಾಜಿ ಸಚಿವರಿಗೆ ನೀಡಲಾಗಿರುವ ಮಧ್ಯಂತರ ರಕ್ಷಣೆಯನ್ನು ಅದೇ ದಿನದ ವರೆಗೆ ವಿಸ್ತರಿಸಿದೆ.

Advertisement

ಇದೇ ವೇಳೆ ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ನ್ಯಾಯಪೀಠದ ಅವಗಾಹನೆಗೆ ತರಬೇಕು ಎಂದು ಇಚ್ಛಿಸಿರುವ ದಾಖಲೆಗಳನ್ನೆಲ್ಲ ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಸಾಲಿಸಿಟರ್‌ ಜನರಲ್ಗೆ ಸೂಚಿಸಿದೆ. ಅವುಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ನಿರ್ಧಾರ ಪ್ರಕಟಿಸುವುದಾಗಿ ನ್ಯಾಯಪೀಠ ಹೇಳಿತು. ಇದೇ ವೇಳೆ ಚಿದು ಅವರ ಸಿಬಿಐ ಕಸ್ಟಡಿ ಆ.30ರಂದು ಮುಕ್ತಾಯವಾಗಲಿದೆ. ಇದೇ ವೇಳೆ ಬಂಧಿತರಾಗಿರುವ ಪಿ.ಚಿದಂಬರಂ ಸೆ.2ರ ವರೆಗೆ ಸಿಬಿಐ ವಶದಲ್ಲಿಯೇ ಇರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ವಕೀಲರ ಮೂಲಕ ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದ್ದಾರೆ.

ಚಿದು ಕೇಸಲ್ಲಿ ಬಂದ ಹಫೀಜ್‌, ಝಕೀರ್‌…: ಈ ಪ್ರಕರಣದಲ್ಲಿ ಚಿದಂಬರಂ ಜತೆಗೆ ಮಾಹಿತಿ ಹಂಚಿಕೊಳ್ಳುವ ಬಗ್ಗೆ ಸುಪ್ರೀಂಕೋರ್ಟ್‌ ಸಲಹೆ ಮಾಡಬಾರದು ಎಂದು ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ಅರಿಕೆ ಮಾಡಿದ್ದಾರೆ. ಒಂದು ವೇಳೆ ನ್ಯಾಯಪೀಠ ಅಂಥ ಆದೇಶ ನೀಡಿದರೆ, ವಿಜಯ ಮಲ್ಯ, ಮೆಹುಲ್ ಚೋಸ್ಕಿ, ನೀರವ್‌ ಮೋದಿ, ಛಗನ್‌ ಭುಜಬಲ್, ದೀಪಕ್‌ ತಲ್ವಾರ್‌, ಝಕೀರ್‌ ನಾಯ್ಕ, ಹಫೀಜ್‌ ಸಯೀದ್‌ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೂ ಇದೇ ಮಾನದಂಡ ಅನುಸರಿಸಬೇಕಾದ ಅನಿವಾರ್ಯ ಬರಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next