ಹೊಸದಿಲ್ಲಿ: ಜಡ್ಜ್ಗಳ ನೇಮಕ ಮತ್ತು ವರ್ಗಾವಣೆ ಸಂಬಂಧ ಕೊಲಿಜಿಯಂ ಶಿಫಾರಸುಗಳಿಗೆ ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Advertisement
ಕಳೆದ ನವೆಂಬರ್‌ನಿಂದ ಈವರೆಗೆ ಕೊಲಿಜಿಯಂನ 70 ಶಿಫಾರಸುಗಳು ಪೆಂಡಿಂಗ್‌ನಲ್ಲಿದ್ದು, ಇಷ್ಟು ಸಮಯವಾದರೂ ಸರಕಾರ ಇನ್ನೂ ಅದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ನ್ಯಾ.| ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ| ಸುಂಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ಮಂಗಳವಾರ ಹೇಳಿದೆ. ಜತೆಗೆ, ಆದಷ್ಟು ಬೇಗ ನಿಮ್ಮ ಕಾರ್ಯಾಲಯವನ್ನೇ ಬಳಸಿಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಅಟಾರ್ನಿ ಜನರಲ್‌ಗೆ ನ್ಯಾಯಪೀಠ ಸೂಚಿಸಿದೆ.