Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಅತೃಪ್ತ ಶಾಸಕರು ಅನರ್ಹರು ಎಂಬ ಸ್ಪೀಕರ್ ಆದೇಶಕ್ಕೆ ನ್ಯಾಯಾಲಯ ಮನ್ನಣೆ ನೀಡಿದೆ. ಆದರೆ ಚುನಾವಣೆಗೆ ಸ್ಪ ರ್ಧಿಸಲು ಅವಕಾಶ ನೀಡಿದ್ದು, ಅನರ್ಹ ಶಾಸಕರು ಸ್ಪರ್ಧಿಸಲಿ. ರಾಜ್ಯದ ಮತದಾರರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಅನರ್ಹರು ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಸ್ವಾರ್ಥಕ್ಕೋಸ್ಕರ ಸಿದ್ಧಾಂತಗಳಿಗೆ ಧಕ್ಕೆ ತಂದಿದ್ದಾರೆ. ಇದು ಎಲ್ಲ ಪಕ್ಷಗಳಿಗೂ ಪಾಠವಾಗಿದೆ. ದೇಶದಲ್ಲಿ ಪûಾಂತರ ಕಾಯ್ದೆ ಸುಧಾರಣೆಯಾಗಬೇಕು. ರಾಜ್ಯದಲ್ಲಿ ಸರಕಾರ ರಚಿಸಿದ್ದೇ ವಾಮಮಾರ್ಗದಿಂದ. ಈ ಸರಕಾರಕ್ಕೆ ಅಸ್ತಿತ್ವವೇ ಇಲ್ಲ. ಅದನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು. ಇಂಥ ಅನೈತಿಕ ಸರಕಾರದ ಹೊಣೆ ಹೊತ್ತ ಸಿಎಂ ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಲಿ. ಅನರ್ಹರಾಗಲಿ, ಅವರ ಕುಟುಂಬದವರಾಗಲಿ ಪಕ್ಷಕ್ಕೆ ಹಿಂದಿರುಗಿದರೆ ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದರು.