Advertisement

ಸುಪ್ರೀಂ ತೀರ್ಪು: ಕರವೇ ಸ್ವಾಗತ

08:15 AM Feb 17, 2018 | Team Udayavani |

ಹಾಸನ: ಕಾವೇರಿ ವಿವಾದದಲ್ಲಿ ಸುಪ್ರೀಂ ಕೋರ್ಟ್‌ ಶುಕ್ರವಾರ ನೀಡಿರುವ ತೀರ್ಪನ್ನು ಕರ್ನಾಟಕ ರಕ್ಷಣಾ ವೇದಿಕೆ ಮತ್ತಿತರ ಕನ್ನಡಪರ  ಸಂಘಟನೆಗಳು ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿವೆ.

Advertisement

ತೀರ್ಪು ಪ್ರಕಟವಾದ ನಂತರ ಹೇಮಾವತಿ ಪ್ರತಿಮೆ ಬಳಿ ಸಮಾವೇಶಗೊಂಡ ಕಾರ್ಯಕರ್ತರು ಸಂತಸ ಹಂಚಿಕೊಂಡು ಘೋಷಣೆ ಕೂಗಿದರು. ಕಾವೇರಿ ನ್ಯಾಯಾಧೀಕರಣ ನಿಗದಿಪಡಿಸಿದ್ದಕ್ಕಿಂತ  ಹೆಚ್ಚುವರಿಯಾಗಿ ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರನ್ನು ನೀಡಿದೆ. ಕಾವೇರಿ ಕಣಿವೆಯಲ್ಲಿ ನೀರಾವರಿ ಪ್ರದೇಶದ ವಿಸ್ತರಣೆಗೂ ಅವಕಾಶ ನೀಡಿದೆ ಸಂಭ್ರಮ ಆಚರಿಸಿದರು. ಮೂರು ದಶಕಗಳಿಂದ ವರ್ಷಗಳಿಂದ ಕನ್ನಡಿಗರು ಅನುಭವಿಸಿದ್ದ ನೋವು ಸ್ವಲ್ಪ ಮಟ್ಟಿಗೆ ನಿವಾರಣೆಯಾಗಿದೆ. ಮುಂದಿನ 15 ವರ್ಷಗಳವರೆಗೆ ಈ ತೀರ್ಪು ಅನ್ವಯವಾಗಲಿದೆ ಎಂದು ತಿಳಿಸಿರುವುದು ನೆಮ್ಮದಿ ದೊರಕಿದೆ. ರಾಜ್ಯದಲ್ಲಿ ಶಾಂತಿ ನೆಲಸಲು ಪೂಕರವಾಗಿದೆ. ಕನ್ನಡಿಗರು ಹಿಗ್ಗಿ ಸಂಭ್ರಮ ಆಚರಿಸುವಂತಹ ತೀರ್ಪು ಅಲ್ಲದ್ದಿರೂ ನೆಮ್ಮದಿ ಪಡಬಹುದಾದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ ಎಂದು ಕರವೇ (ಪ್ರವೀಣ್‌ ಶೆಟ್ಟಿ) ಬಳಗದ ಜಿಲ್ಲಾ ಅಧ್ಯಕ ಸತೀಶ್‌ ಪಟೇಲ್‌, ಉಪಾಧ್ಯಕ್ಷ ದೇವು ಮತ್ತು ಕಾರ್ಯಕರ್ತರು ಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next