Advertisement

ಸುಪ್ರೀಂ ವೆಬ್‌ ಹ್ಯಾಕ್‌

09:20 AM Apr 20, 2018 | Team Udayavani |

ಹೊಸದಿಲ್ಲಿ: ಸುಪ್ರೀಂಕೋರ್ಟ್‌ ವೆಬ್‌ಸೈಟ್‌ ಅನ್ನು ಗುರುವಾರ ಹ್ಯಾಕ್‌ ಮಾಡಲಾಗಿದೆ. ಈ ಕೃತ್ಯದ ಹಿಂದೆ ಬ್ರೆಜಿಲ್‌ ಮೂಲದ ಗುಂಪಿನ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಸುಪ್ರೀಂಕೋರ್ಟ್‌ ವೆಬ್‌ಸೈಟ್‌ಗೆ ಲಾಗ್‌ ಇನ್‌ ಆದಾಗ ಎಲೆಯ ಚಿತ್ರವನ್ನು ತೋರಿಸುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕೇಂದ್ರ ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ ಹ್ಯಾಕ್‌ ಆಗಿತ್ತು. ಈ ವರ್ಷದಾರಂಭದಲ್ಲಿ ಕೇಂದ್ರ ಗೃಹ ಸಚಿವಾಲಯದ ವೆಬ್‌ ಸೈಟ್‌ ಕೂಡ ಹ್ಯಾಕ್‌ ಆಗಿತ್ತು. ಈ ಘಟನೆ ಹಿಂದೆ ಚೀನಾ ಹ್ಯಾಕರ್‌ಗಳ ಕೃತ್ಯವಿದೆ ಎಂದು ಶಂಕಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next