Advertisement

ಕನ್ನಡದಲ್ಲೂ ಸಿಗಲಿದೆ ಸುಪ್ರೀಂ ಕೋರ್ಟ್‌ ತೀರ್ಪು

01:47 AM Jul 04, 2019 | mahesh |

ಹೊಸದಿಲ್ಲಿ: ತೀರ್ಪುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ದೃಷ್ಟಿಯಿಂದ ಕನ್ನಡ ಸಹಿತ ಆರು ಪ್ರಾಂತೀಯ ಭಾಷೆಗಳಲ್ಲಿ ತೀರ್ಪುಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಈ ಮಾಸಾಂತ್ಯದಿಂದ ಹಿಂದಿ, ಕನ್ನಡ, ಮರಾಠಿ, ಅಸ್ಸಾಮಿ, ಒಡಿಯಾ ಮತ್ತು ತೆಲುಗು ಭಾಷೆಗಳಲ್ಲೂ ತೀರ್ಪುಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.

Advertisement

ಇಂಗ್ಲಿಷ್‌ ಆವೃತ್ತಿಯನ್ನು ತೀರ್ಪು ನೀಡಿದ ದಿನವೇ ಪ್ರಕಟಿಸಿದರೆ, ಇತರ ಭಾಷೆಗಳ ಪ್ರತಿಗಳು ಒಂದು ವಾರದ ಬಳಿಕ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿವೆ. ವೆಬ್‌ಸೈಟ್‌ನಲ್ಲಿ ಇದಕ್ಕೆ ಅಗತ್ಯವಿರುವ ಬದಲಾವಣೆಗಳನ್ನು ಮಾಡಲಾಗುತ್ತಿದೆ.

ಅಪರಾಧ ಪ್ರಕರಣಗಳು, ಭೂಮಾಲಕರು ಹಾಗೂ ಗೇಣಿ ವಿವಾದಗಳು, ವೈವಾಹಿಕ ಪ್ರಕರಣಗಳು, ಸಿವಿಲ್ ದೂರುಗಳಿಗೆ ಸಂಬಂಧಿಸಿದ ತೀರ್ಪುಗಳನ್ನು ಮೊದಲು ಅನುವಾದ ಮಾಡಿ ಪ್ರಕಟಿಸಲಾಗುತ್ತದೆ. ಈ ಪ್ರಸ್ತಾವನೆಯನ್ನು 2017ರ ಅಕ್ಟೋಬರ್‌ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಪ್ರಸ್ತಾವಿಸಿದ್ದರು. ಪ್ರಾಂತೀಯ ಭಾಷೆಗಳಿಗೆ ಅನುವಾದಿಸಿದ ಪ್ರಮಾಣೀಕೃತ ಪ್ರತಿಗಳನ್ನು ಹೈಕೋರ್ಟ್‌ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಅವರು ಸೂಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next