Advertisement
ಕೇಂದ್ರ ಸರಕಾರ ಐಟಿ ಕಾಯ್ದೆಗೆ ತಿದ್ದುಪಡಿ ತಂದು, ಆಧಾರ್ ಅನ್ನು ಪಾನ್ ಕಾರ್ಡ್ ಜತೆ ಲಿಂಕ್ ಮಾಡುವ ಬಗ್ಗೆ ಕಡ್ಡಾಯ ಮಾಡಿತ್ತು. ಜು. 1ರಿಂದ ಹೊಸದಾಗಿ ಪಾನ್ ಮಾಡಿಸಿಕೊಳ್ಳುವವರು ಆಧಾರ್ ಜೋಡಿಸಿಯೇ ಮಾಡಿಸಬೇಕಿತ್ತು. ಅಲ್ಲದೆ ಐಟಿ ರಿಟರ್ನ್ಸ್ ವೇಳೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಲೇಬೇಕಿತ್ತು. ಸರಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ವಿಚಾರಣೆ ನಡೆಸುತ್ತಿರುವ ಕೋರ್ಟ್, ಐಟಿ ಕಾಯ್ದೆ ತಿದ್ದುಪಡಿ ಮಾಡುವ ಎಲ್ಲ ಅಧಿಕಾರ ಕೇಂದ್ರ ಸರಕಾರಕ್ಕಿದೆ ಎಂದಿದೆ. ಆದರೆ, ಆಧಾರ್ ಲಿಂಕ್ ಮಾಡದ ಪ್ಯಾನ್ ಅನ್ನು ರದ್ದು ಮಾಡಬಾರದು ಎಂದು ಸೂಚಿಸಿದೆ. ಜತೆಗೆ, ಆಧಾರ್ ಅಂಶಗಳು ಸೋರಿಕೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸು. ಕೋರ್ಟ್ ಈ ಬಗ್ಗೆ ನಿಗಾ ವಹಿಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಆಧಾರ್ ಇರುವವರು ಕಡ್ಡಾಯವಾಗಿ ಪಾನ್‌ಕಾರ್ಡ್ ಜತೆ ಜೋಡಿಸಲೇಬೇಕು ಆಧಾರ್‌ಮಾಡಿಸಿಕೊಳ್ಳದೆ ಇರುವವರಿಗೆ ಸದ್ಯ ವಿನಾಯಿತಿ ಇವರ ಪಾನ್ ರದ್ದು ಮಾಡದಂತೆ ಸುಪ್ರೀಂಕೋರ್ಟ್‌ನಿಂದ ಸೂಚನೆ
ಸಂವಿಧಾನ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆ ಪೂರ್ಣಗೊಳ್ಳುವವರೆಗೆ ವಿನಾಯಿತಿ ಆಧಾರ್ ಲಿಂಕ್ ಮಾಡದ ಪಾನ್ ರದ್ದು ಮಾಡಬಾರದು ಎಂಬ ಸುಪ್ರೀಂಕೋರ್ಟ್‌ನ ಆದೇಶ ಸ್ವಾಗತಾರ್ಹ. ಅದು ಜನರ ಖಾಸಗಿ ಹಕ್ಕನ್ನು ಎತ್ತಿಹಿಡಿದಿದೆ.
– ಟಾಮ್ ವಡಕ್ಕನ್, ಕಾಂಗ್ರೆಸ್ ವಕ್ತಾರ