ನವದೆಹಲಿ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಒಂದು ಹುದ್ದೆ; ಒಂದು ಪಿಂಚಣಿ ಯೋಜನೆಯಲ್ಲಿ ಸಾಂವಿಧಾನಿಕ ನ್ಯೂನತೆ ಇಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.
ಈ ಬಗ್ಗೆ ಪ್ರಶ್ನೆ ಮಾಡಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಡಿ.ವೈ.ಚಂದ್ರಚೂಡ್, ನ್ಯಾ.ಸೂರ್ಯಕಾಂತ್ ಮತ್ತು ನ್ಯಾ.ವಿಕ್ರಮ್ ನಾಥ್ ಅವರನ್ನೊಳಗೊಂಡ ನ್ಯಾಯಪೀಠ, ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಯಲ್ಲಿ ಲೋಪವಿಲ್ಲ ಮತ್ತು ಅದು ಏಕಪಕ್ಷೀಯವಾಗಿಲ್ಲ.
ನ್ಯಾಯಾಲಯ ಸರ್ಕಾರದ ನೀತಿ ನಿರ್ಧಾರಗಳನ್ನು ಪ್ರಶ್ನೆ ಮಾಡಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
2019 ಜು.1ರಿಂದ ಅನ್ವಯವಾಗುವಂತೆ ಒಂದು ಹುದ್ದೆ; ಒಂದು ಪಿಂಚಣಿಗೆ ಸೇರ್ಪಡೆಯಾಗುವವರ ಅಂಶ ಬಾಕಿ ಇದ್ದಲ್ಲಿ, ಅವರನ್ನು ಸೇರಿಸಿಕೊಂಡು ಬಾಕಿ ಮೊತ್ತವನ್ನು ಮೂರು ತಿಂಗಳ ಒಳಗಾಗಿ ಪಾವತಿ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿದೆ.
ಐದು ವರ್ಷಕ್ಕೊಮ್ಮೆ ಪರಿಶೀಲನೆಯ ಬದಲಾಗಿ, ಭಗತ್‌ಸಿಂಗ್ ಕೋಶಿಯಾರಿ ಸಮಿತಿ ಶಿಫಾರಸಿನಂತೆ ಪ್ರತಿ ವರ್ಷವೂ ಕೂಡ ಒಆರ್‌ಒಪಿ ಅರ್ಜಿಗಳನ್ನು ಪರಿಶೀಲಿಸಿ ಪಿಂಚಣಿ ವಿತರಿಸಬೇಕು ಎಂದು ನಿವೃತ್ತ ಸೈನಿಕರ ಒಕ್ಕೂಟ ಅರ್ಜಿ ಸಲ್ಲಿಸಿತ್ತು.