Advertisement

ಹೆದ್ದಾರಿಗಳಲ್ಲಿ ಮದ್ಯದಂಗಡಿ: ಇಂದು ಸುಪ್ರೀಂ ತೀರ್ಪು

01:58 AM Mar 31, 2017 | Team Udayavani |

ಹೊಸದಿಲ್ಲಿ: ರಾಜ್ಯ, ರಾಷ್ಟ್ರೀಯ ಹೆದ್ದಾರಿಯಲ್ಲಿ 500 ಮೀ.ವ್ಯಾಪ್ತಿಯಲ್ಲಿ ಮದ್ಯದಂಗಡಿಗಳು ಇರಬಾರದು ಎಂಬ ಬಗ್ಗೆ ತನ್ನದೇ ಆದೇಶವನ್ನು ಪುನರ್‌ ಪರಿಶೀಲನೆಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮುಕ್ತಾಯಗೊಳಿಸಿದ್ದು, ಶುಕ್ರವಾರ ತೀರ್ಪು ನೀಡಲಿದೆ. ಸಿಜೆಐ ಜೆ.ಎಸ್‌. ಖೇಹರ್‌ ನೇತೃತ್ವದ ನ್ಯಾಯಪೀಠದ ಎದುರು ವಾದ ಮಂಡಿಸಿದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ‘ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಒಂದೇ ರೀತಿ ಪರಿಗಣಿಸುವುದು ಸರಿಯಲ್ಲ. ಕೆಲ ನಗರ, ಪಟ್ಟಣಗಳು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುತ್ತವೆ.ರಾಜ್ಯ ಹೆದ್ದಾರಿಗಳಿಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಆಯಾ ರಾಜ್ಯ ಸರಕಾರಗಳಿಗೆ ನೀಡಬೇಕು’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next