Advertisement

ರಫೇಲ್ ಖರೀದಿ ವೇಳೆ ಮಧ್ಯವರ್ತಿಗೆ ಹಣ ನೀಡಿಕೆ ಆರೋಪ‌ : ವಿಚಾರಣೆಗೆ ಸುಪ್ರೀಂ ಅಸ್ತು

09:28 PM Apr 12, 2021 | Team Udayavani |

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಬೇಕೆಂದು ಕೋರಿ ವಕೀಲ ಎಂ.ಎಲ್‌.ಶರ್ಮಾ ಅವರು ಹೊಸದಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, 2 ವಾರಗಳ ಬಳಿಕ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ತಿಳಿಸಿದೆ.

Advertisement

ರಫೇಲ್‌ ಖರೀದಿ ವೇಳೆ ಭಾರತದ ಮಧ್ಯವರ್ತಿಗೆ ಫ್ರಾನ್ಸ್‌ನ ಡಸಾಲ್ಟ್ ಕಂಪನಿಯು 9 ಕೋಟಿ ರೂ. ನೀಡಿತ್ತು ಎಂಬ ಆರೋಪ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ವಕೀಲರಾದ ಎಂ.ಎಲ್‌. ಶರ್ಮಾ ಎಂಬುವರು ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ತನಿಖೆಗೊಳಪಡಿಸಬೇಕು ಎಂದು ಮನವಿ ಸಲ್ಲಿಸಿದ್ದರು.

ಮನವಿಯನ್ನು ಅವಗಾಹನೆ ಮಾಡಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬೆx ಅವರು ಅರ್ಜಿದಾರರಿಗೆ ವಿಚಾರಣೆ ಕೈಗೆತ್ತಿಗೊಳ್ಳುವ ಭರವಸೆ ನೀಡಿದರು.

ಇದನ್ನೂ ಓದಿ :ಕರ್ತವ್ಯದಲ್ಲಿದ್ದ ಚಾಲಕರ ಪಾದವನ್ನು ತಮ್ಮ ತಲೆಯ ಮೇಲಿಟ್ಟು ಸಾರಿಗೆ ನೌಕರರ ವಿಶೇಷ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next