ರಾಜಸ್ಥಾನ:ಬಿಜೆಪಿ ಮುಖಂಡ, ಮಾಜಿ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗಗೆ ರಾಜಸ್ಥಾನ್ ಹೈಕೋರ್ಟ್ ನೀಡಿದ್ದ ಜಾಮೀನಿಗೆ ಸುಪ್ರೀಂಕೋರ್ಟ್ ಮಂಗಳವಾರ (ಜುಲೈ 23) ತಡೆಯಾಜ್ಞೆ ನೀಡಿರುವುದಾಗಿ ವರದಿಯಾಗಿದೆ.
ಜುಲೈ ತಿಂಗಳ ಮೊದಲ ವಾರದಲ್ಲಿ ರಾಜಸ್ಥಾನ್ ಹೈಕೋರ್ಟ್ ನ ಜಸ್ಟೀಸ್ ಫರ್ಜಾದ್ ಅಲಿ ಮಾಜಿ ಶಾಸಕ ಮಾಲಿಂಗಗೆ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಎಂಎಂ ಸುಂದ್ರೇಶ್ ಮತ್ತು ಜಸ್ಟೀಸ್ ಅರವಿಂದ್ ಕುಮಾರ್ ತಡೆ ನೀಡಿದ್ದಾರೆ. ಅಲ್ಲದೇ ಇನ್ನೊಂದು ತಿಂಗಳೊಳಗೆ ಮಾಲಿಂಗ ಶರಣಾಗುವಂತೆ ನಿರ್ದೇಶನ ನೀಡಿದೆ.
ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹರ್ಷದೀಪ್ತಿ ಎಂಬವರು ಮಾಲಿಂಗ ವಿರುದ್ಧ ದೂರು ನೀಡಿದ್ದರು. 2022ರ ಮಾರ್ಚ್ ನಲ್ಲಿ ಹರ್ಷದೀಪ್ತಿ ವಾಲ್ಮೀಕಿ ಅವರ ಮೇಲೆ ಮಾಲಿಂಗ ಹಲ್ಲೆ ನಡೆಸಿದ್ದರು. ನಂತರ ಮಾಲಿಂಗ Bari ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ನವೆಂಬರ್ ನಲ್ಲಿ ಮಾಲಿಂಗ ಅವರು ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಚುನಾವಣೆಯಲ್ಲಿ ಮಾಲಿಂಗ ಕಾಂಗ್ರೆಸ್ ಅಭ್ಯರ್ಥಿ ಜಸ್ವಂತ್ ಸಿಂಗ್ ಗುರ್ಜರ್ ಎದುರು ಪರಾಭವಗೊಂಡಿದ್ದರು.
ಇದನ್ನೂ ಓದಿ:Udupi:ಪ್ರವಾಸಿ ವಾಹನಗಳಿಗೆ ಜಿಪಿಎಸ್,ಪ್ಯಾನಿಕ್ ಬಟನ್ ಕಡ್ಡಾಯ ಅಳವಡಿಕೆ ವಿರೋಧಿಸಿ ಪ್ರತಿಭಟನೆ