Advertisement

Supreme Court:ವಿಶೇಷ ಲೋಕ ಅದಾಲತ್‌ ಆರಂಭ

12:11 AM Jul 30, 2024 | Team Udayavani |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ 75 ವರ್ಷಾಚರಣೆಯ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಲೋಕ ಅದಾಲತ್‌ ಸೋಮವಾರ ಆರಂಭವಾ ಗಿದೆ. ಮಾಧ್ಯಮಗಳ ಸಮ್ಮುಖದಲ್ಲಿ ರಾಜಿ ಒಪ್ಪಂದಗಳ ಮೂಲಕ ವ್ಯಾಜ್ಯ ಗಳನ್ನು ಬಗೆಹರಿಸುವ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್‌ ಮುಂದಾಗಿದೆ. ಈ ಲೋಕ ಅದಾಲತ್‌ ಆ.3ರ ವರೆಗೆ ನಡೆಯಲಿದೆ. ಈ ಮೂಲಕ ಭಾರೀ ಪ್ರಮಾ ಣ ದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತಿದೆ.

Advertisement

ಸುಪ್ರೀಂ ಕೋರ್ಟ್‌ನ ಮೊದಲ ಏಳು ಪೀಠಗಳು ಈ ಕಾರ್ಯವನ್ನು ನಡೆಸಿಕೊ ಡಲಿವೆ. ಲೋಕ ಅದಾಲತ್‌ ಮುಂದೆ ಹೋಗಬ ಹು ದಾದ ಪ್ರಕರಣಗಳಿದ್ದರೆ ತನ್ನಿ ಎಂದು ಸೋಮವಾರದ ನ್ಯಾಯ ಕಲಾಪ ಆರಂಭದಲ್ಲೇ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ ಹೇಳಿದ್ದಾರೆ. ಇದಕ್ಕೂ ಮೊದಲು ನಾಗರಿ ಕರಿಗೂ ಕರೆ ನೀಡಿದ್ದ ಸಿಜೆಐ, ಸುಪ್ರೀಂ ಕೋರ್ಟ್‌ ಮುಂದೆ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್‌ಗೆ ತೆಗೆದುಕೊಂಡು ಹೋಗುವಂತೆ ತಿಳಿಸಿ ದ್ದರು. ಲೋಕ ಅದಾಲತ್‌ಗಳ ಭಾರ ತೀಯ ನ್ಯಾಯ ವ್ಯವಸ್ಥೆಯ ಪ್ರಮುಖ ವ್ಯವಸ್ಥೆಯಾಗಿವೆ. ರಾಜಿ ಸಂಧಾನಗಳ ಮೂಲಕ ವ್ಯಾಜ್ಯಗಳ ಇತ್ಯರ್ಥಕ್ಕೆ ವೇಗ ನೀಡಲು ಇವುಗಳಿಂದ ಸಾಧ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next