Advertisement
ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪ್ರಮಾಣಗಳ ಕೊರತೆಯ ವಿಷಯ ಹಾಗೂ ಹಲವಾರು ನ್ಯೂನತೆಗಳನ್ನು ಎತ್ತಿ ತೋರಿಸಿದ ನ್ಯಾಯಾಲಯವು, ತನ್ನ ಲಸಿಕಾ ನೀತಿಯನ್ನು ಪರಿಶೀಲಿಸಲು ಮತ್ತು “ಡಿಸೆಂಬರ್ 31, 2021 ರವರೆಗೆ ಲಸಿಕೆಗಳ ಲಭ್ಯತೆಯ ಮಾರ್ಗಸೂಚಿಯನ್ನು ದಾಖಲಿಸುವಂತೆ” ಕೇಂದ್ರಕ್ಕೆ ಆದೇಶಿಸಿದೆ.
Related Articles
Advertisement
ಈ ‘ಸಾಂಕ್ರಾಮಿಕ ರೋಗದ ಸ್ವರೂಪ” ಕಿರಿಯ ವಯಸ್ಸಿನವರಿಗೂ ಲಸಿಕೆ ಹಾಕುವಂತಹ ಸನ್ನಿವೇಶವನ್ನು ಸೃಷ್ಟಿಸಿದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್.ಎನ್.ರಾವ್ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ತಿಳಿಸಿದೆ.
ಇನ್ನು, “18-44 ವಯೋಮಾನದ ವ್ಯಕ್ತಿಗಳಿಗೆ ಲಸಿಕೆ ನೀಡುವ ಪ್ರಾಮುಖ್ಯತೆಯಿಂದಾಗಿ, ಮೊದಲ 2 ಹಂತಗಳ ಅಡಿಯಲ್ಲಿ ಈ ವಯೋ ಮಾನದವರಿಗೆ ಉಚಿತ ಲಸಿಕೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ನಂತರ ನೀತಿ ಮತ್ತು ಅದನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳು ಪಾವತಿ ಮೂಲಕ 18-44 ವಯೋಮಾನದವರಿಗೆ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡುತ್ತಿರುವ ಕೇಂದ್ರ ಸರ್ಕಾರದ ಲಸಿಕಾ ನೀತಿ ಅಸಮರ್ಪಕ ಎಂದಿದೆ.
45 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆಗಳನ್ನು ನೀಡಲಾಗುತ್ತದೆ ಎಂದು ಮೇ 1 ರಂದು ಪ್ರಕಟಿಸಿತ್ತು. ಆ ವಯೋಮಾನಕ್ಕಿಂತ ಕೇಳಗಿನವರು ಉತ್ಪಾದಕರಿಂದ ಶೇಕಡಾ 50 ರಷ್ಟು ಕಡಿಮೆ ದರದಲ್ಲಿ ಖರೀದಿಸಬಹುದೆಂದಿತ್ತು, ಆದರೇ, ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಲಸಿಕೆಗಳು ಮಾರಾಟವಾಗುತ್ತಿವೆ. ಖಾಸಗಿ ಆಸ್ಪತ್ರೆಗಳು ದುಬಾರಿ ಬೆಲೆಗೆ ಲಸಿಕೆನ್ನು ನೀಡುತ್ತಿವೆ.
ಇನ್ನು, ಕೇಂದ್ರ ಸರ್ಕಾರದ ಈ ಲಸಿಕಾ ನೀತಿಯನ್ನು ವಿರೋಧ ಪಕ್ಷ ಕಾಂಗ್ರೆಸ್ ಕೂಡ ಪ್ರಶ್ನಿಸಿದ್ದು, “ಒಂದು ದೇಶ, ಒಂದು ಬೆಲೆ” ಗಾಗಿ ಕೇಂದ್ರವನ್ನು ಒತ್ತಾಯಿಸಿದ್ದಲ್ಲದೇ, ಲಸಿಕೆಯನ್ನು ಕೇಂದ್ರ ಸರ್ಕಾರ ಲಾಭದ ಅಸ್ತ್ರವನ್ನಾಗಿ ಮಾಡುವುದಕ್ಕೆ ಹೊರಟಿದೆ ಎಂದು ಆರೋಪಿಸಿದೆ.
ಇನ್ನು, ಲಸಿಕೆ ಸಂಗ್ರಹಕ್ಕಾಗಿ, 35,000 ಕೋಟಿ ಬಜೆಟ್ ನನ್ನು ಹೇಗೆ ಖರ್ಚು ಮಾಡಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲು ಕೇಂದ್ರವನ್ನು ಕೋರ್ಟ್ ಕೇಳಿದೆ. “ಲಸಿಕೆಗಾಗಿ 35,000 ಕೋಟಿ ನಿಗದಿಪಡಿಸಿದ್ದರೆ, ಅದನ್ನು 18-44 ವಯಸ್ಸಿನವರಿಗೆ ಲಸಿಕೆ ಹಾಕಲು ಏಕೆ ಬಳಸಲಾಗುವುದಿಲ್ಲ” ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಕೇಂದ್ರವು ತನ್ನ ಲಸಿಕೆ ಖರೀದಿ ಇತಿಹಾಸದ ಸಂಪೂರ್ಣ ಡೇಟಾವನ್ನು ಇಲ್ಲಿಯವರೆಗೆ ನೀಡುವಂತೆ ಕೇಳಿಕೊಂಡಿದ್ದಲ್ಲದೇ, ಕೋವಿಶೀಲ್ಡ್, ಕೊವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಲಸಿಕೆಗಳ ಡೋಸ್ ಗಳ ಸಂಖ್ಯೆ ಮತ್ತು ಪೂರೈಕೆಯ ದಿನಾಂಕದ ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ಕೇಳಿಕೊಂಡಿದೆ.
ಕೇಂದ್ರದ ವಾದವನ್ನು ಪ್ರತಿರೋಧಿಸಿದ ಕೋರ್ಟ್, “ಕಾರ್ಯನಿರ್ವಾಹಕ ನೀತಿಗಳಿಂದ ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದಾಗ ನ್ಯಾಯಾಲಯಗಳು ಮೂಕ ಪ್ರೇಕ್ಷಕರಂತೆ ಇರಲು ಸಾಧ್ಯವಿಲ್ಲ” ಎಂದು ಹೇಳಿದೆ.
ಸಂಭವನೀಯ ಮೂರನೇ ಅಲೆಯ ಸಿದ್ಧತೆ, ಮಕ್ಕಳ ಸುರಕ್ಷತೆಯ ಬಗ್ಗೆ ನಿಲುವ ಹಾಗೂ ಲಸಿಕೆ ಅಭಿಯಾನದ ಜೊತೆಗೆ ಡಿಸೆಂಬರ್ 31ರೊಳಗೆ ಲಭ್ಯವಿರುವ ಲಸಿಕೆಗಳ ಪ್ರಮಾಣಗಳನ್ನು ಒಳಗೊಂಡು ಸ್ಮಶಾನ ಕಾರ್ಮಿಕರ ಸಂಖ್ಯೆ ಇತ್ಯಾದಿ ವಿಚಾರಗ ಬಗ್ಗೆ ಮಾಹಿತಿಯನ್ನು ಒದಗಿಸುವಂತೆ ಕೇಂದ್ರಕ್ಕೆ ಆದೇಶಿಸಿದೆ.
ಇದನ್ನೂ ಓದಿ : ಕೋವಿಡ್ ಲಾಕ್‌ಡೌನ್ ಆದ ಬೆಳಪು ಗ್ರಾಮಕ್ಕೆ ತಹಶೀಲ್ದಾರ್ ಭೇಟಿ, ಪರಿಶೀಲನೆ