Advertisement

ತುಂಬಿದ ಜೈಲುಗಳು: ಸುಪ್ರೀಂ ಕಳವಳ

07:00 AM Mar 31, 2018 | Team Udayavani |

ಹೊಸದಿಲ್ಲಿ: ದೇಶದಲ್ಲಿನ ಸುಮಾರು 1,300 ಜೈಲುಗಳಲ್ಲಿ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳನ್ನು ಇರಿಸಿರುವುದನ್ನು ಸುಪ್ರೀಂ ಕೋರ್ಟ್‌ ತೀವ್ರವಾಗಿ ಖಂಡಿಸಿದೆ. ಹಲವಾರು ವಿಚಾರಣಾಧೀನ ಕೈದಿಗಳಿಗೆ ಜಾಮೀನು ಸಿಕ್ಕಿದ್ದರೂ, ಶ್ಯೂರಿಟಿ ಹಣ ಕಟ್ಟದ ಕಾರಣ ಬಿಡುಗಡೆ ಮಾಡದಿರುವುದು, ಚಿಕ್ಕ ತಪ್ಪುಗಳಿಗಾಗಿ ಬಂಧಿತ ರಾಗಿರುವವರನ್ನು ಜಾಮೀನು ಪಡೆದಿಲ್ಲ ಎಂಬ ಕಾರಣಕ್ಕಾಗಿ ಇನ್ನೂ ಜೈಲಿನಲ್ಲೇ ಇರಿಸಿರುವುದರ ವಿರುದ್ಧ ನ್ಯಾಯಪೀಠ ಖೇದ ವ್ಯಕ್ತಪಡಿಸಿತು. ಇಂಥ ಕೈದಿಗಳ ಸಹಾಯಕ್ಕೆಂದೇ ಇರುವ ವಿಚಾರಾಣಾಧೀನ ಕೈದಿಗಳ ಪರಾಮರ್ಶೆ ಸಮಿತಿಗಳು ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ. ಕೈದಿಗಳ ಹಿತಾಸಕ್ತಿ ಬಗ್ಗೆ ತಾನು ಹಿಂದೆ ನೀಡಿದ್ದ ಆದೇಶಗಳನ್ನೂ ಪಾಲಿಸುವಲ್ಲಿ ರಾಜ್ಯ ಸರಕಾರಗಳು, ಕೇಂದ್ರಾಡಳಿತ ಪ್ರದೇಶಗಳು ವಿಫ‌ಲವಾಗಿವೆ ಎಂದು ಕೋರ್ಟ್‌ ಬೇಸರ ವ್ಯಕ್ತಪಡಿಸಿತು. 

Advertisement

ಜೊತೆಗೆ, ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾರಾಗೃಹ ಪೊಲೀಸ್‌ ಮಹಾ ನಿರ್ದೇಶಕರಿಗೆ ಸಮಸ್ಯೆ ನಿವಾರಿಸಲು  ತೆಗೆದುಕೊಂಡಿರುವ ಕ್ರಮಗಳ ಬಗ್ಗೆ  2  ವಾರಗಳೊಳಗಾಗಿ ನ್ಯಾಯಾಲಯಕ್ಕೆ ತಿಳಿಸುವಂತೆ ಸೂಚಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next