Advertisement

ಕಾನೂನು ಸಮರದಲ್ಲಿ ಪವಾರ್‌ ಗೆ ಕೈ ಕೊಟ್ಟ “ಗಡಿಯಾರ”, ಸುಪ್ರೀಂನಲ್ಲಿ ಅಜಿತ್‌ ಬಣಕ್ಕೆ ಮೇಲುಗೈ

04:27 PM Oct 24, 2024 | Team Udayavani |

ನವದೆಹಲಿ: Nationalist Congress ಪಕ್ಷದ “ಗಡಿಯಾರ” ಚಿಹ್ನೆ ಅಜಿತ್‌ ಪವಾರ್‌ ಬಣಕ್ಕೆ ಸೇರಿದೆ ಎಂದು ಸುಪ್ರೀಂಕೋರ್ಟ್‌(Supreme court) ಗುರುವಾರ (ಅ.24) ತೀರ್ಪು ನೀಡಿದ್ದು, ಇದರ ಪರಿಣಾಮ ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಿಟ್ಟಿನಲ್ಲಿ ಶರದ್‌ ಪವಾರ್‌ ಗೆ ಕಾನೂನು ಸಮರದಲ್ಲಿ ಭಾರೀ ಹಿನ್ನಡೆ ಉಂಟಾದಂತಾಗಿದೆ.

Advertisement

ಈ ಸಂದರ್ಭದಲ್ಲಿ ಅಜಿತ್‌ ಪವಾರ್‌ ಬಣವು ಈ ಹಿಂದೆ ನೀಡಿರುವ ಆದೇಶಕ್ಕೆ ಬದ್ಧವಾಗಿರಬೇಕು. ಅಷ್ಟೇ ಅಲ್ಲ ಚುನಾವಣಾ ಜಾಹೀರಾತುಗಳಲ್ಲಿ ಹಕ್ಕು ನಿರಾಕರಣೆ ಅಂಶ ಸೇರಿಸಬೇಕು…ಈ ಪ್ರಕರಣದಲ್ಲಿ ಕೋರ್ಟ್‌ ಇನ್ನಷ್ಟೇ ಅಂತಿಮ ಆದೇಶ ನೀಡಬೇಕಾಗಿದೆ ಎಂದು ಸುಪ್ರೀಂ ಪೀಠ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

ಎನ್‌ ಸಿ (NC) ಪಕ್ಷದ ಹೆಸರು ಮತ್ತು ಚುನಾವಣ ಚಿಹ್ನೆಯನ್ನು ಅಜಿತ್‌ ಪವಾರ್‌ ಬಣಕ್ಕೆ ನೀಡಿರುವ ಚುನಾವಣ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಶರದ್‌ ಪವಾರ್‌ ಅವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರಿಂದ ಕೋರ್ಟ್‌ ಈ ಮಧ್ಯಂತರ ಆದೇಶವನ್ನು ನೀಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next