Advertisement

ತ.ನಾಡಿಗೆ ಸುಪ್ರೀಂ ಹಿನ್ನಡೆ

06:00 AM Dec 14, 2018 | |

ಹೊಸದಿಲ್ಲಿ: ಮೇಕೆ ದಾಟು ಅಣೆಕಟ್ಟು ಯೋಜನೆ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ತಮಿಳು ನಾಡಿಗೆ ತೀವ್ರ ಮುಖಭಂಗವಾಗಿದೆ. ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಸುವಂತೆ ಕೇಂದ್ರ ಜಲ ಆಯೋಗ ನೀಡಿರುವ ಅನುಮತಿಗೆ ತಡೆ ನೀಡಬೇಕು ಎಂಬ ತಮಿಳುನಾಡು ಸರಕಾರದ ಮನವಿಯನ್ನು ಬುಧವಾರ ಸುಪ್ರೀಂಕೋರ್ಟ್‌ ತಳ್ಳಿ ಹಾಕಿದೆ. ಡಿಪಿಆರ್‌ ಸಲ್ಲಿಕೆ ಅಂದರೆ ಯೋಜನೆಗೆ ಅನುಮತಿ ನೀಡಿ ದಂತಲ್ಲ ಎಂದು ನ್ಯಾ| ಎ.ಎಂ. ಖಾನ್ವಿಲ್ಕರ್‌ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ. ಹೀಗಾಗಿ ಕರ್ನಾಟಕ ನ್ಯಾಯಾಂಗ ನಿಂದನೆ ಎಸಗಿದೆ ಎಂದು ಕೇಸು ಹಾಕಿದ್ದ ತಮಿಳುನಾಡಿಗೆ ಹಿನ್ನಡೆ ಉಂಟಾಗಿದೆ. ಜತೆಗೆ ನಾಲ್ಕು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಕರ್ನಾಟಕ ಮತ್ತು ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌ ನೀಡಿದೆ. ರಾಜ್ಯ ಸರಕಾರದ ಪರವಾಗಿ ವಾದಿಸಿದ ಅಡ್ವೊ ಕೇಟ್‌ ಜನರಲ್‌ ಉದಯ ಹೊಳ್ಳ, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇವಲ ಯೋಜನಾ ವರದಿ ಸಿದ್ಧತೆಗೆ ಅನುಮತಿ ಸಿಕ್ಕಿದೆ. ಈ ಸಂದರ್ಭ ನೆರೆ ರಾಜ್ಯದ ಅಭಿಪ್ರಾಯ ಪಡೆಯಲಾಗುತ್ತದೆ ಎಂದಿದ್ದಾರೆ. 

Advertisement

ಕೇಂದ್ರದ ಪರವಾಗಿ ವಾದಿಸಿದ ಡಬ್ಲೂ.ಎ. ಖಾದ್ರಿ, ಸುಪ್ರೀಂ ಆದೇಶದನ್ವಯ ಡಿಪಿಆರ್‌ ಸಲ್ಲಿಸಬಹುದು. ಈ ಬಗ್ಗೆ ಅಭಿಪ್ರಾಯ ಸಲ್ಲಿಸಲು ಸಮಯ ನೀಡಬೇಕು ಎಂದು ನ್ಯಾಯಪೀಠಕ್ಕೆ ಅರಿಕೆ ಮಾಡಿಕೊಂಡರು. ಅಂತಿಮವಾಗಿ ಸುಪ್ರೀಂ ಕೋರ್ಟ್‌ ಡಿಪಿಆರ್‌ ಬಗ್ಗೆ ತಿಂಗಳೊಳ ಗಾಗಿ ಉತ್ತರ ನೀಡುವಂತೆ ಕೋರ್ಟ್‌ ನೋಟಿಸ್‌ ನೀಡಿತು. ನ. 22ರಂದು ಕೇಂದ್ರ ಜಲ ಆಯೋಗ ಡಿಪಿಆರ್‌ಗಾಗಿ ಅನುಮತಿ ನೀಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next