Advertisement

D. K. Shivakumar ವಿರುದ್ಧದ ಸಿಬಿಐ ಎಫ್ಐಆರ್‌ ವಜಾಗೆ ಸುಪ್ರೀಂ ಕೋರ್ಟ್‌ ನಕಾರ

01:13 AM Jul 16, 2024 | Team Udayavani |

ಹೊಸದಿಲ್ಲಿ: ಕರ್ನಾಟಕ ಉಪಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌(D. K. Shivakumar) ಅವರಿಗೆ ಸುಪ್ರೀಂ ಕೋರ್ಟ್‌ (Supreme Court ) ಆಘಾತ ನೀಡಿದೆ. ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ಸಿಬಿಐ ಸಲ್ಲಿಸಿರುವ ಎಫ್ಐಆರ್‌ ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.

Advertisement

“ಕ್ಷಮಿಸಿ, ಕರ್ನಾಟಕ ಹೈಕೋರ್ಟ್‌ ಆದೇಶದಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ’ ಎಂದು ಹೇಳಿದ ನ್ಯಾ| ಬೇಲಾ ಎಂ. ತ್ರಿವೇದಿ ಮತ್ತು ನ್ಯಾ| ಸತೀಶ್‌ ಚಂದ್ರ ಶರ್ಮಾ ಅವರಿದ್ದ ನ್ಯಾಯಪೀಠವು ಡಿ.ಕೆ. ಶಿವಕುಮಾರ್‌ ಅವರ ಅರ್ಜಿಯನ್ನು ತಳ್ಳಿಹಾಕಿತು.

ಅರ್ಜಿಯ ವಿಚಾರಣೆ ಆರಂಭವಾ ದೊಡನೆ ಡಿ.ಕೆ. ಶಿವಕುಮಾರ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೋಹಟಗಿ, ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್‌ 17ಎ ಅನ್ವಯ ಅನುಮತಿ ಪಡೆಯದೆ ತನಿಖೆ ಆರಂಭಿಸಲಾಗಿದೆ. ಕೆಲವು ವಹಿವಾಟುಗಳಿಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಈಗಾಗಲೇ ತನಿಖೆ ನಡೆಸುತ್ತಿದ್ದು, ಅದೇ ವಹಿವಾಟಿಗೆ ಸಂಬಂಧಿಸಿ ಸಿಬಿಐ ಹೊಸದಾಗಿ ಎಫ್ಐಆರ್‌ ದಾಖಲಿಸುವಂತಿಲ್ಲ ಎಂದು ಹೇಳಿದರು. ಆದರೆ ನ್ಯಾಯಪೀಠ ಅವರ ವಾದವನ್ನು ಪರಿಗಣಿಸಲಿಲ್ಲ.

“ಭ್ರಷ್ಟ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಿದು. ಐಎನ್‌ಸಿ ಅಂದರೆ ಇಂಡಿಯನ್‌ ನ್ಯಾಶನಲ್‌ ಕಾಂಗ್ರೆಸ್‌ ಅಲ್ಲ, ಐ ನೀಡ್‌ ಕರಪ್ಶನ್‌ (ನನಗೆ ಭ್ರಷ್ಟಾಚಾರ ಬೇಕು) ಎಂದರ್ಥ. ಡಿಕೆಶಿ ಅರ್ಜಿ ತಿರಸ್ಕೃತಗೊಂಡಿದೆ ಎಂದು ಈಗ ಅವರು ಸುಪ್ರೀಂ ಕೋರ್ಟ್‌ ಅನ್ನು ಟೀಕಿಸುತ್ತಾರಾ? ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುತ್ತಾರಾ?’
-ಶೆಹಜಾದ್‌ ಪೂನಾವಾಲ, ಬಿಜೆಪಿ ರಾಷ್ಟ್ರೀಯ ವಕ್ತಾರ

ಏನಿದು ಪ್ರಕರಣ?
-2013ರಿಂದ 2018ರ ಅವಧಿಯಲ್ಲಿ ಡಿಕೆಶಿ ಆದಾಯ ಮೀರಿದ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ
– 2017ರಲ್ಲಿ ಐಟಿ ಇಲಾಖೆ ಯಿಂದ ಅವರ ಮನೆ, ಕಚೇರಿಗಳಲ್ಲಿ ಶೋಧಅದರ ಬೆನ್ನಲ್ಲೇ ಜಾರಿ ನಿರ್ದೇಶನಾಲ ಯ ದಿಂದಲೂ ತನಿಖೆ ಆರಂಭ
-ಇ.ಡಿ. ತನಿಖೆ ಆಧಾರದಲ್ಲಿ ಡಿಕೆಶಿ ವಿರುದ್ಧ ಎಫ್ಐಆರ್‌ ದಾಖಲಿಸಿದ ಸಿಬಿಐ
– 2021ರಲ್ಲಿ ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಡಿಕೆಶಿ
-2023ರ ಅ. 19ರಂದು ಡಿಕೆಶಿ ಮನವಿ ತಳ್ಳಿಹಾಕಿದ್ದ ಕರ್ನಾಟಕ ಹೈಕೋರ್ಟ್‌ ತನಿಖೆ ಪೂರ್ಣಗೊಳಿಸಿ, 3 ತಿಂಗಳೊಳಗೆ ವರದಿ ನೀಡುವಂತೆ ಸಿಬಿಐಗೆ ಹೈಕೋರ್ಟ್‌ ಸೂಚನೆ
-ಹೈಕೋರ್ಟ್‌ ಆದೇಶ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಡಿಕೆಶಿ

Advertisement

ನನ್ನದೇನೂ ತಪ್ಪಿಲ್ಲ,
ದಾಖಲೆ ನೀಡುವೆ
ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಆ ಅರ್ಜಿಯನ್ನು ನ್ಯಾಯಾ ಲಯ ತಿರಸ್ಕರಿಸಿದೆ ಎಂಬ ಮಾಹಿತಿ ದೊರೆತಿದೆ. ನನ್ನದೇನೂ ತಪ್ಪಿಲ್ಲ. ಎಲ್ಲ ದಾಖಲೆಗಳನ್ನೂ ಒದಗಿಸುತ್ತೇನೆ.
-ಡಿ.ಕೆ. ಶಿವಕುಮಾರ್‌, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next