Advertisement

ಮೈಸೂರಿನ 1,561 ಎಕ್ರೆ ರಾಜಮನೆತನದ್ದು: ಸುಪ್ರೀಂ ಕೋರ್ಟ್‌

11:54 PM Nov 25, 2021 | Team Udayavani |

ಹೊಸದಿಲ್ಲಿ: ಮೈಸೂರಿನಲ್ಲಿ  ಇರುವ 1,561.31 ಎಕ್ರೆ ಜಮೀನು ರಾಜ ಮನೆತನಕ್ಕೆ ಸೇರಿದ್ದು ಎಂಬ ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದ್ದ ಜು.26ರ ಆದೇಶವನ್ನು ಪುನರ್‌ ಪರಿಶೀಲಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಹೀಗಾಗಿ ಕರ್ನಾಟಕ ಸರಕಾರಕ್ಕೆ ಹಿನ್ನಡೆಯಾಗಿದೆ.

Advertisement

ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಪುನರ್‌ ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿತ್ತು. ಅರ್ಜಿ ಮರು ಪರಿಶೀಲನೆಗೆ ಸಮರ್ಥಿ ಸುವಂಥ ಯಾವುದೇ ಅಂಶ ಇಲ್ಲ. ಹೀಗಾಗಿ ಅರ್ಜಿಯನ್ನು ಮಾನ್ಯ ಮಾಡಲಾಗದು ಎಂದು ನ್ಯಾ| ಯು.ಯು.ಲಲಿತ್‌ ಮತ್ತು ನ್ಯಾ| ಅಜಯ ರಸ್ತೋಗಿ ನೇತೃತ್ವದ ನ್ಯಾಯಪೀಠ ತಿಳಿಸಿದೆ.  ಇದರ ಜತೆಗೆ  ಮೂಲ ಅರ್ಜಿದಾರರು (ರಾಜಮನೆತನ) ಸಲ್ಲಿಸಿದ್ದ ಅರ್ಜಿಯಲ್ಲಿನ ಅಂಶಗಳನ್ನು ಗಮನಿಸಿ, ಕರ್ನಾಟಕ ಹೈಕೋರ್ಟ್‌ 2020ರ ಡಿ.15ರಂದು ನೀಡಿದ್ದ ತೀರ್ಮಾನವನ್ನೂ ಪರಿಗಣಿಸ ಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

1,563.31 ಎಕರೆ ಪ್ರದೇಶದ ಪೈಕಿ 600 ಎಕರೆಗಿಂತಲೂ ಅಧಿಕ ಪ್ರದೇಶದಲ್ಲಿ ಸರಕಾರ, ಸಾರ್ವಜನಿಕ ಆಸ್ತಿಗಳಾದ ಕೆರೆ, ಅರಣ್ಯ ಪ್ರದೇಶ, ಕರ್ನಾಟಕ ರಾಜ್ಯ ಆಡಳಿತಾತ್ಮಕ ತರಬೇತಿ ಸಂಸ್ಥೆ, ರಾಜ್ಯ ಗ್ರಾಮಾಭಿವೃದ್ಧಿ ಸಂಸ್ಥೆ, ಲಲಿತಮಹಲ್‌ ಪ್ಯಾಲೇಸ್‌, ಹೆಲಿಪ್ಯಾಡ್‌, ರೇಸ್‌ಕೋರ್ಸ್‌, ಪೊಲೀಸ್‌ ಇಲಾಖೆಯ ಮೋಟಾರು ವಿಭಾಗ ಸಹಿತ ಹಲವು ಆಸ್ತಿಗಳಿವೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next