ಶಿಮ್ಲಾ: ಜೋಶಿಮಠ ಭೂಕುಸಿತ ಹಾಗೂ ಮನೆಗಳಲ್ಲಿ ಬಿರುಕು ಮೂಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Advertisement
ಜತೆಗೆ ಉತ್ತರಾಖಂಡ ಹೈಕೋರ್ಟ್ ವಿಚಾರಣೆ ಮುಂದುವರಿಸಲಿ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಸೋಮವಾರ ನಿರ್ದೇಶಿಸಿದೆ.
ಈ ಬಗ್ಗೆ ಅರ್ಜಿದಾರ ಸ್ವಾಮಿ ಅವಿಮುಕ್ತೇಶ್ವ ರಾನಂದ ಸರಸ್ವತಿ ಪರ ವಕೀಲರಿಗೆ ಸೂಚನೆ ನೀಡಿ, “ಹೈಕೋರ್ಟ್‌ನಲ್ಲಿ ಹೊಸತಾಗಿ ಪಿಐಎಲ್ ಸಲ್ಲಿಸಿ.
ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ವಿಚಾರಣೆಯನ್ನು ಮುಂದಿಟ್ಟು ಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗಳು ನಡೆಯುವುದು ಅಗತ್ಯವಿಲ್ಲ’ ಎಂದು ಹೇಳಿತು.