Advertisement
ಪಾರ್ಸಿ ಮಹಿಳೆಯೊಬ್ಬರು ವಿಶೇಷ ವಿವಾಹ ಕಾಯ್ದೆಯನ್ವಯ ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದರೆ, ಪಾರ್ಸಿ ಕಾನೂನನ್ನು ಉಲ್ಲೇಖೀಸಿದ್ದ ಬಾಂಬೆ ಹೈಕೋರ್ಟ್, ಅನ್ಯಧರ್ಮೀಯ ವ್ಯಕ್ತಿಯನ್ನು ಮದುವೆಯಾದರೆ, ಆ ಮಹಿಳೆ ಕೂಡ ಪತಿಯ ಧರ್ಮಕ್ಕೆ ಮತಾಂತರವಾದಂತೆ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮಹಿಳೆಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ತ್ರಿಸದಸ್ಯ ಪೀಠವು, ಇದನ್ನು ಸಂವಿಧಾನ ಪೀಠವೇ ನಿರ್ಧರಿಸಲಿ ಎಂದಿದೆ.
ಕೇಂದ್ರ ಮತ್ತು ದೆಹಲಿ ಸರ್ಕಾರಗಳ ನಡುವಿನ ಆಡಳಿತಾತ್ಮಕ ಸಂಘರ್ಷ, ಪರೋಕ್ಷ ದಯಾಮರಣ, ಪಾರ್ಸಿ ಮಹಿಳೆಯ ವಿವಾಹಕ್ಕೆ ಸಂಬಂಧಿಸಿದ ಮೇಲ್ಮನವಿ ಸೇರಿದಂತೆ ಒಟ್ಟು 6 ಪ್ರಮುಖ ಪ್ರಕರಣಗಳ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಮುಂದೆ ಬರಲಿದೆ. ಸಿಜೆಐ ದೀಪಕ್ ಮಿಶ್ರಾ, ನ್ಯಾ.ಎ.ಕೆ.ಸಿಕ್ರಿ, ನ್ಯಾ.ಎ.ಎಂ. ಕನ್ವಿಳ್ಕರ್, ನ್ಯಾ.ಡಿ.ವೈ.ಚಂದ್ರಚೂಡ್ ಹಾಗೂ ನ್ಯಾ. ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ಆರಂಭಿಸಲಿದೆ.