ನವದೆಹಲಿ: ನೂತನ ಸಂಸತ್ ಭವನ ನಿರ್ಮಿಸುವ ಕೇಂದ್ರ ಸರ್ಕಾರದ ಮಹತ್ವದ “ಸೆಂಟ್ರಲ್ ವಿಸ್ಟಾ” ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಸುಪ್ರೀಂಕೋರ್ಟ್ ಸೋಮವಾರ(ಡಿಸೆಂಬರ್ 07, 2020) ಅನುಮತಿ ನೀಡಿದೆ.
ನೂತನ ಸಂಸತ್ ಭವನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿಗಳು ಇತ್ಯರ್ಥವಾಗುವವರೆಗೆ ಆ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣವಾಗಲಿ ಅಥವಾ ಕಟ್ಟಡ ತೆರವುಗೊಳಿಸುವ ಕಾರ್ಯ ನಡೆಯುವುದಿಲ್ಲ ಎಂದು ಲಿಖಿತ ಉತ್ತರ ನೀಡಿದ ಮೇಲಷ್ಟೇ ಸುಪ್ರೀಂಕೋರ್ಟ್ ಶಂಕುಸ್ಥಾಪನೆ ನೆರವೇರಿಸಲು ಅನುಮತಿ ನೀಡಿದೆ.
“ಯಾವುದೇ ರೀತಿಯಿಂದಲೂ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳದೆ ಪ್ರಾಥಮಿಕ ಹಂತದ ಪ್ರಕ್ರಿಯೆ ನಡೆಸಲು ಅಧಿಕಾರಿಗಳು ಮುಕ್ತರಾಗಿದ್ದಾರೆ” ಎಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ತಿಳಿಸಿದೆ.
ಇದನ್ನೂ ಓದಿ:ಸರ್ಕಾರ ರೈತರ ಪರವಾಗಿದೆ, ಈ ರೀತಿ ಬಂದ್ ಮಾಡುವುದರಿಂದ ಅರ್ಥವಿಲ್ಲ: ಬಿಎಸ್ ವೈ
“ನೂತನ ಸಂಸತ್ ಭವನಕ್ಕಾಗಿ ಶಂಕುಸ್ಥಾಪನೆ ನೆರವೇರಿಸಿ, ಇದಕ್ಕೆ ಸಂಬಂಧಿಸಿದ ದಾಖಲೆಗಳ ಕೆಲಸ ಮಾಡಬಹುದು. ಆದರೆ ಯಾವುದೇ ನಿರ್ಮಾಣ ಕಾರ್ಯವಾಗಲಿ ಅಥವಾ ಧ್ವಂಸ ಕಾರ್ಯಾಚರಣೆಯಾಗಲಿ, ಮರಗಳನ್ನು ಕತ್ತರಿಸುವ ಕೆಲಸ ನಡೆಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಸೂಚಿಸಿದೆ.