ನವದೆಹಲಿ: 2021ರಲ್ಲಿ ಪಶ್ಚಿಮಬಂಗಾಳದಲ್ಲಿ(West Bengal) ನಡೆದ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳ ವಿಚಾರಣೆಯ ವರ್ಗಾವಣೆ ಕೋರಿ ಸಿಬಿಐ(CBI) ಸಲ್ಲಿಸಿದ್ದ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ (Supreme court) ಶುಕ್ರವಾರ (ಸೆ.20) ತರಾಟೆಗೆ ತೆಗೆದುಕೊಂಡಿದ್ದು, ನ್ಯಾಯಾಂಗ ನಿಂದನೆ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
“ಪಶ್ಚಿಮಬಂಗಾಳದ ಇಡೀ ನ್ಯಾಯಾಂಗ ವ್ಯವಸ್ಥೆ ಮೇಲೆ ಸಿಬಿಐ ದೋಷಾರೋಪ ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಪೀಠದ ಜಸ್ಟೀಸ್ ಅಭಯ್ ಓಕಾ ಮತ್ತು ಜಸ್ಟೀಸ್ ಪಂಕಜ್ ಮಿಥಾಲ್ ಅಭಿಪ್ರಾಯವ್ಯಕ್ತಪಡಿಸಿದರು.”
ಸಿಬಿಐ(CBI) ದಾಖಲಿಸಿದ್ದ ಮನವಿಯನ್ನು ವಾಪಸ್ ಪಡೆಯುವಂತೆ ಸುಪ್ರೀಂಪೀಠ ಆದೇಶ ನೀಡಿ, ಪಶ್ಚಿಮಬಂಗಾಳದ ಎಲ್ಲಾ ಕೋರ್ಟ್ ಗಳ ವಿಚಾರಣೆಯಲ್ಲಿ ಭಯದ ವಾತಾವರಣ ಇದೆ ಎಂಬ ಆರೋಪಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿ, ಚಾಟಿ ಬೀಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ
ನೀವು ಇಡೀ ನ್ಯಾಯಾಂಗ ವ್ಯವಸ್ಥೆ ಮೇಲೆ ಹೇಗೆ ಆರೋಪ ಹೊರಿಸುತ್ತೀರಿ? ಇಡೀ ಪಶ್ಚಿಮಬಂಗಾಳದಲ್ಲಿ ದ್ವೇಷದ ವಾತಾವರಣ ಇದೆ ಎಂದು ನೀವು (ಸಿಬಿಐ) ತೋರಿಸುತ್ತಿದ್ದೀರಿ ಎಂದು ಪೀಠ ಅಸಮಧಾನ ವ್ಯಕ್ತಪಡಿಸಿರುವುದಾಗಿ ಪಿಟಿಐ ವರದಿ ಮಾಡಿದೆ.