Advertisement

Supreme Court: ಅಂತಿಮ ತೀರ್ಪಿಗೆ ಕಾರಣವನ್ನು 5 ದಿನದಲ್ಲಿ ಪ್ರಕಟಿಸಿ: ಸುಪ್ರೀಂ

08:03 PM Oct 23, 2024 | Team Udayavani |

ನವದೆಹಲಿ: ಯಾವುದೇ ಪ್ರಕರಣಗಳಲ್ಲಿ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ 5 ದಿನದೊಳಗೆ ಕಾರಣವನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ಹೈಕೋರ್ಟ್‌ಗಳಿಗೆ ತಿಳಿಸಿದೆ.

Advertisement

ಆದೇಶವನ್ನು ತಡವಾಗಿ ಪ್ರಕಟಿಸುವ ಮೂಲಕ ನ್ಯಾಯದ ಹೋರಾಟದಲ್ಲಿ ಸೋತ ವ್ಯಕ್ತಿಯ ಮನದಲ್ಲಿ ಅನುಮಾನ ಮೂಡುತ್ತದೆ ಎಂದು ಕೋರ್ಟ್‌ ಹೇಳಿದೆ. ಏ.30ರಂದು ಗುಜರಾತ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೋರ್ಟ್‌ಗಳು ನೀಡುವ ಆದೇಶಗಳು ಸಮಾಜದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ನ್ಯಾಯಾಧೀಶರು ಅರ್ಥ ಮಾಡಿಕೊಳ್ಳಬೇಕು. ತೀರ್ಪುಗಳು ಪ್ರಮಾಣಿಕ, ದೋಷಾರೋಪಣೆ ಮಾಡಲಾಗದ ರೀತಿ, ಸಮಗ್ರತೆ ಮತ್ತು ಅಚಲ ತತ್ವಗಳಿಂದ ಕೂಡಿರಬೇಕು. ಸಮಾಜ ಕೂಡ ಹೈಕೋರ್ಟ್‌ ನ್ಯಾಯಮೂರ್ತಿಗಳಿಂದ ಇದನ್ನೇ ನಿರೀಕ್ಷಿಸುತ್ತದೆ ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ: Cyclone Dana: ಒಡಿಶಾದ ಜಗನ್ನಾಥ ದೇವಾಲಯ, ಕೋನಾರ್ಕ್ ಸೂರ್ಯ ದೇವಾಲಯಕ್ಕೆ ಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next