Advertisement
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಮಣಿಪುರದಲ್ಲಿ ನಡೆದಿರುವುದನ್ನು, ಇಂತಹ ಪ್ರಕರಣಗಳು ಬೇರೆಡೆ ಕೂಡ ನಡೆದಿದೆ ಎಂದು ಹೇಳುವ ಮೂಲಕ ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಂಗಾಳ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಮಾತನಾಡಿದ ವಕೀಲರಿಗೆ ಪ್ರತಿಕ್ರಿಯಿಸಿ ಈ ಪ್ರತಿಕ್ರಿಯೆ ನೀಡಿದ್ದಾರೆ.
Related Articles
Advertisement
ಸಿಜೆಐ ಚಂದ್ರಚೂಡ್ ಅವರು ಮೈತೆಯ್ ಸಮುದಾಯದ ಪರವಾಗಿ ಹಾಜರಾಗುವ ವಕೀಲರಿಗೆ ನಾವು ಕೇಸ್ ಪೇಪರ್‌ಗಳನ್ನು ಮಾತ್ರ ಓದಿಲ್ಲ ಎಂದು ಭರವಸೆ ನೀಡಿದ್ದಾರೆ. ನಾನೂ ಕೂಡ ವಿಡಿಯೋ ನೋಡಿದ್ದೇನೆ. ಆ ವಿಡಿಯೋ ದೇಶದ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ನಾವು ಪ್ರಕರಣವನ್ನು ಗಮನಿಸಿದ್ದೇವೆ ಎಂದು ಹೇಳಿದ್ದಾರೆ.
ಬದುಕುಳಿದವರು ತನಿಖೆಯಲ್ಲಿ ವಿಶ್ವಾಸ ಹೊಂದಬೇಕು ಎಂದು ವಾದಿಸಿದ ಮಹಿಳಾ ವಕೀಲರ ಕೋರಿಕೆಯ ಮೇರೆಗೆ, ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡಿದರೆ ತನ್ನ ಅಭ್ಯಂತರವಿಲ್ಲ ಎಂದು ಸರಕಾರ ಹೇಳಿದೆ.
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸುವಂತೆ ಕೇಂದ್ರದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.ಪ್ರಕರಣವನ್ನು ಸಿಬಿಐಗೆ ವಹಿಸಿರುವ ಕೇಂದ್ರದ ಕ್ರಮಕ್ಕೆ ಕಪಿಲ್ ಸಿಬಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಅಸ್ಸಾಂಗೆ ವರ್ಗಾಯಿಸುವಂತೆ ಸರಕಾರ ಮಾಡಿದ ಮನವಿಗೂ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರಕರಣವನ್ನು ಅಸ್ಸಾಂಗೆ ವರ್ಗಾಯಿಸುವಂತೆ ಕೇಂದ್ರವು ಎಂದಿಗೂ ಕೋರಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ. ನ್ಯಾಯಾಲಯವು ಸೂಕ್ತವೆಂದು ತೀರ್ಮಾನಿಸುವ ಕಡೆಗೆ ವರ್ಗಾವಣೆಯನ್ನು ಕೇಂದ್ರವು ಕೋರಿದೆ ಎಂದು ಮೆಹ್ತಾ ಸ್ಪಷ್ಟಪಡಿಸಿದ್ದಾರೆ.