ಹೊಸದಿಲ್ಲಿ: ಕೇಂದ್ರೀಯ ವಿಶ್ವ ವಿದ್ಯಾಲಯಗಳು ಮತ್ತು ಯುಜಿಸಿ ಮಾನ್ಯತೆ ಪಡೆದಿರುವ ಉನ್ನತ ಶಿಕ್ಷಣ ಸಂಸ್ಥೆಗಳ ವಿವಿಧ ಬೋಧನಾ ವಿಭಾಗಗಳಲ್ಲಿನ ಖಾಲಿ ಹುದ್ದೆಗಳ ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೀಸಲಾತಿ ಆಯಾ ವಿಭಾಗಾವಾರು ಮಟ್ಟದಲ್ಲೇ ನಿರ್ಧಾರವಾಗಬೇಕೇ ಹೊರತು, ಈ ಬಗ್ಗೆ ಸಂಬಂಧಪಟ್ಟ ವಿಶ್ವವಿದ್ಯಾಲಯ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಈ ಮೂಲಕ, ಅಲಹಾಬಾದ್ ಹೈಕೋರ್ಟ್, 2017ರಲ್ಲಿ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿರುವ ನ್ಯಾಯಪೀಠ, ವಿಶ್ವವಿದ್ಯಾಲ ಯಗಳ ಎಲ್ಲಾ ವಿಭಾಗಗಳಲ್ಲಿ ಸಮಾನ ವಿದ್ಯಾರ್ಹತೆ, ಸಮಾನ ವೇತನ ಶ್ರೇಣಿ ಹಾಗೂ ಸಮಾನ ಸ್ಥಾನಮಾನಗಳ ಹುದ್ದೆಗಳನ್ನು ಒಂದೇ ಗುಂಪಿನಲ್ಲಿ ಪರಿಗಣಿಸಬಾರದೆಂದೂ ಸ್ಪಷ್ಟಪಡಿಸಿದೆ.
ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರವನ್ನು, “ಅಂಗರಚನಾ ಶಾಸ್ತ್ರದ ಪ್ರಾಧ್ಯಾಪಕ ಹಾಗೂ ಭೂಗೋಳದ ಪ್ರಾಧ್ಯಾಪಕರನ್ನು ಒಂದೇ ಎಂದು ಹೇಗೆ ಪರಿಗಣಿಸುತ್ತೀರಿ?’ ಎಂದು ಪ್ರಶ್ನಿಸಿದ ನ್ಯಾಯಪೀಠ, “ಕಿತ್ತಳೆ ಹಣ್ಣುಗಳನ್ನು, ಸೇಬುಗಳೊಂದಿಗೆ ಹೋಲಿಸಲು ಸಾಧ್ಯವೇ? ಹಾಗೆಯೇ, ವಿವಿಧ ಬೋಧಕ ವಿಭಾಗಗಳ ಪ್ರಾಧ್ಯಾಪಕರ ಹುದ್ದೆಗಳು ಪರಸ್ಪರ ವಿಭಿನ್ನವಾಗಿರುವುದರಿಂದ, ಎಲ್ಲಾ ವಿಭಾಗ ಗಳಲ್ಲಿರುವ ಖಾಲಿ ಹುದ್ದೆಗಳ ಮೀಸಲಾತಿ ವಿಭಾಗೀಯ ಮಟ್ಟದಲ್ಲೇ ತೀರ್ಮಾನವಾಗಲಿ’ ಎಂದಿತು. ಈ ತೀರ್ಪಿನಿಂದಾಗಿ, “”ಕೇಂದ್ರೀಯ ವಿವಿಗಳಲ್ಲಿ ಖಾಲಿ ಇರುವ ಶೇ.35ರಷ್ಟು ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಬೇಗನೇ ಚಾಲನೆ ದೊರೆಯಲಿದೆ” ಎಂದು ಹೇಳಲಾಗಿದೆ.
ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ನ್ಯಾಯಪೀಠದ ಬೆಂಬಲ
ಕೇಂದ್ರೀಯ ವಿವಿಗಳ ಮಟ್ಟದಲ್ಲಿ ಮೀಸಲಾತಿ ನಿರ್ಧಾರವಾಗಲಿ ಎಂದ ಸುಪ್ರೀಂ ಕೋರ್ಟ್