Advertisement

ಮರಣ ಸಮಯದ ಹೇಳಿಕೆ ಒಪ್ಪಲು ಅಥವಾ ತಿರಸ್ಕರಿಸಲು ನಿರ್ದಿಷ್ಟ ಮಾನದಂಡವಿಲ್ಲ: ಸುಪ್ರೀಂ

09:56 PM Mar 27, 2021 | Team Udayavani |

ನವದೆಹಲಿ: ಯಾವುದೇ ವ್ಯಕ್ತಿಯ ಮರಣ ಸಂದರ್ಭದ ಹೇಳಿಕೆಯನ್ನು ಒಪ್ಪಿಕೊಳ್ಳಲು ಅಥವಾ ತಿರಸ್ಕರಿಸಲು ನಿರ್ದಿಷ್ಟವಾದ “ಕಠಿಣ ಮಾನದಂಡ’ ಎಂಬುದಿಲ್ಲ. ಹಾಗಾಗಿ, ಸಾಯುವ ವೇಳೆ ಆ ವ್ಯಕ್ತಿಯು ಸ್ವಇಚ್ಛೆಯಿಂದ ನೀಡುವ ಹೇಳಿಕೆಯು ವಿಶ್ವಾಸಾರ್ಹ ಎಂದೆನಿಸಿದರೆ, ಅದರ ಆಧಾರದಲ್ಲೇ ಆರೋಪಿಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ಒಂದು ವೇಳೆ ಸಾಯುವ ಸಮಯದಲ್ಲಿ ವ್ಯಕ್ತಿ ನೀಡಿದ ಹೇಳಿಕೆಯ ಸತ್ಯಾಸತ್ಯತೆ ಅಥವಾ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಮೂಡುವಂಥ ವ್ಯತಿರಿಕ್ತ ಸಾಕ್ಷ್ಯಗಳೇನಾದರೂ ದೊರೆತರೆ, ಆಗ ಆರೋಪಿಯ ವಾದವನ್ನು ಪರಿಗಣಿಸಬಹುದಾಗಿದೆ ಎಂದೂ ನ್ಯಾ. ನವೀನ್‌ ಸಿನ್ಹಾ ಹಾಗೂ ನ್ಯಾ.ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ :ರಾಷ್ಟ್ರಪತಿ ಆರೋಗ್ಯದಲ್ಲಿ ಸ್ಥಿರ : ಸೇನಾ ಆಸ್ಪತ್ರೆಯಿಂದ ದಿಲ್ಲಿ ಏಮ್ಸ್‌ಗೆ ಶಿಫ್ಟ್

Advertisement

Udayavani is now on Telegram. Click here to join our channel and stay updated with the latest news.

Next