Advertisement

ನ್ಯಾಯಾಲಯದ ಆವರಣದೊಳಗಿರುವ ಮಸೀದಿಯನ್ನು 3 ತಿಂಗಳೊಳಗೆ ತೆರವುಗೊಳಿಸಿ: ಸುಪ್ರೀಂ

10:25 PM Mar 13, 2023 | Team Udayavani |

ನವದೆಹಲಿ: ಅಲಹಾಬಾದ್‌ ಉಚ್ಚ ನ್ಯಾಯಾಲಯದ ಆವರಣದೊಳಗಿರುವ ಮಸೀದಿಯನ್ನು ಮೂರು ತಿಂಗಳೊಳಗೆ ತೆರವುಗೊಳಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಸೋಮವಾರ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿತು.

Advertisement

ನ್ಯಾಯಾಲಯದ ಆವರಣದಿಂದ ಮಸೀದಿಯನ್ನು ಮೂರು ತಿಂಗಳೊಳಗೆ ಸ್ಥಳಾಂತರಿಸಬೇಕೆಂದು 2017ರ ನವೆಂಬರ್‌ನಲ್ಲಿ ಅಲಹಾಬಾದ್‌ ಉಚ್ಚಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಮಸೀದಿಯ ವಕ್ಫ್ ಮಂಡಳಿ ಮತ್ತು ಉತ್ತರಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿಯು ಸರ್ವೋಚ್ಚಪೀಠಕ್ಕೆ ಮೊರೆ ಹೋಗಿತ್ತು. ಈ ಮನವಿಯನ್ನು ತಿರಸ್ಕರಿಸಲಾಗಿದೆ.

ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾ.ಎಂ.ಆರ್‌.ಶಾ ಮತ್ತು ನ್ಯಾ. ಸಿ.ಟಿ.ರವಿಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠವು, ಮಸೀದಿಯ ಭೋಗ್ಯದ ಅವಧಿಯು ಮುಗಿದಿರುವ ಕಾರಣ ಅದರ ಮೇಲಿನ ಹಕ್ಕನ್ನು ಪ್ರತಿಪಾದಿಸಲು ಅರ್ಜಿದಾರರಿಗೆ ಅವಕಾಶವಿಲ್ಲ ಎಂದು ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next