Advertisement

ಮೂರ್ಖರನ್ನಾಗಿಸುತ್ತಿದೆ ಕಾರ್‍ಯಾಂಗ: ಸುಪ್ರೀಂ

10:10 AM Apr 11, 2018 | Team Udayavani |

ನವದೆಹಲಿ: ಪರಿಸರ ರಕ್ಷಣೆ ಹಾಗೂ ಜನರ ಅನುಕೂಲಕ್ಕೆಂದು ಮೀಸಲಿಡಲಾದ ಒಂದು ಲಕ್ಷ ಕೋಟಿ ರೂ. ನಿಧಿಯನ್ನು ಇತರ ಉದ್ದೇಶಗಳಿಗೆ ಬಳಸಿಕೊಂಡಿರುವ ಕಾರ್‍ಯಾಂಗದ ಕ್ರಮವನ್ನು ತೀವ್ರವಾಗಿ ಟೀಕಿಸಿರುವ ಸುಪ್ರೀಂಕೋರ್ಟ್‌, ಕಾರ್‍ಯಾಂಗವು ನಮ್ಮನ್ನು ಮೂರ್ಖರನ್ನಾಗಿಸುತ್ತಿದೆ ಎಂದಿದೆ. ನಾವು ಕಾರ್‍ಯಾಂಗದ ಮೇಲೆ ವಿಶ್ವಾಸವಿರಿಸುತ್ತೇವೆ. ಆದರೆ ಅಧಿಕಾರಿಗಳು ಕೆಲಸ ಮಾಡುವುದಿಲ್ಲ. ಕೋರ್ಟ್‌ ಕಠಿಣ ಆದೇಶ ನೀಡಿದರೆ, ನ್ಯಾಯಾಲಯವು ಕಾರ್‍ಯಾಂಗದ ಕಾರ್ಯವ್ಯಾಪ್ತಿಯ ಮೇಲೆ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪ ಎದುರಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಮದನ್‌ ಬಿ ಲೋಕೂರ್‌ ಹಾಗೂ ದೀಪಕ್‌ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

Advertisement

ಕಡ್ಡಾಯ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನೆ ಪ್ರಾಧಿಕಾರ ನಿಧಿಯಲ್ಲಿನ 11,700 ಕೋಟಿ ರೂ. ಅನ್ನು ಕೋರ್ಟ್‌ ಆದೇಶದ ಮೇರೆಗೆ ರಚಿಸಲಾಗಿತ್ತು. ಇದೇ ರೀತಿ ಇತರ ನಿಧಿ ಮೂಲಕ ಸಂಗ್ರಹಿಸಿದ ಮೊತ್ತ 1 ಲಕ್ಷ ಕೋಟಿ ರೂ. ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next