Advertisement
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ತಮ್ಮ ವಕೀಲರಾದ ಮುಕುಲ್ ರೋಹಟಗಿ ಮೂಲಕ ಈ ಪ್ರಸ್ತಾವನೆ ಸಲ್ಲಿಸಿದ್ದರು. ಬೆಂಗಳೂರಿನಲ್ಲಿರುವ 18 ಕಾಂಗ್ರೆಸ್ ಶಾಸಕರು, ಸ್ವ ಇಚ್ಛೆಯಿಂದ ಮಧ್ಯಪ್ರದೇಶ ಬಿಟ್ಟುಬಂದಿದ್ದಾರೆ. ಅವರನ್ನು ಬಿಜೆಪಿ, ಬಂದಿಗಳನ್ನಾಗಿ ಇರಿಸಿಕೊಂಡಿಲ್ಲ ಎಂಬುದನ್ನು ಶಾಸಕರಿಂದಲೇ ನ್ಯಾಯಮೂರ್ತಿಗಳಿಗೆ ಖಾಸಗಿಯಾಗಿ ಮನವರಿಕೆ ಮಾಡಿಕೊಡಲು ಚೌಹಾಣ್ ಈ ಪ್ರಸ್ತಾವನೆ ಸಲ್ಲಿಸಿದ್ದರು.
Related Articles
ಮುಖ್ಯಮಂತ್ರಿ ಕಮಲ್‌ನಾಥ್ ಮನವಿ ಮೇರೆಗೆ ತಮ್ಮದೇ ಪಕ್ಷದ ಆರು ಸಚಿವರ ರಾಜೀನಾಮೆಯನ್ನು ಅಂಗೀಕಾರ ಮಾಡಿರುವ ಸ್ಪೀಕರ್‌ರವರ ನಡೆಯನ್ನು ಅಲ್ಲಿನ ರಾಜ್ಯಪಾಲ ಲಾಲ್‌ಜೀ ಟಂಡನ್ ಕೊಂಡಾಡಿದ್ದಾರೆ. “ರಾಜೀನಾಮೆಗಳನ್ನು ಅಂಗೀಕರಿಸಿದ್ದು ನಿಷ್ಪಕ್ಷಪಾತ ಹಾಗೂ ದಿಟ್ಟತನದ ನಡೆ. ಕಳೆದ 8-10 ದಿನಗಳಿಂದ ನೀವು (ಸ್ಪೀಕರ್) ಎಂಥಾ ತೊಳಲಾಟದಲ್ಲಿದ್ದೀರಿ ಎಂಬುದನ್ನು ನಾನು ಬಲ್ಲೆ’ ಎಂದು ರಾಜ್ಯಪಾಲರು ಹೇಳಿದ್ದಾರೆ.
Advertisement
ಬೆಂಗಳೂರಿನಲ್ಲಿ ಪೊಲೀಸರು ದಿಗ್ವಿಜಯ್ ಸಿಂಗ್‌ರನ್ನು ಬಂಧಿಸಿರುವ ಕ್ರಮದಿಂದಾಗಿ ಮೋದಿ ಸರಕಾರ ಸರ್ವಾಧಿಕಾರಿ ಧೋರಣೆ ಮತ್ತು ಹಿಟ್ಲರ್ ಮಾದರಿ ಆಡಳಿತ ನಡೆಸುತ್ತಿದೆ ಎನ್ನುವುದಕ್ಕೆ ಸಾಕ್ಷಿ.– ಕಮಲ್‌ನಾಥ್, ಮಧ್ಯಪ್ರದೇಶ ಮುಖ್ಯಮಂತ್ರಿ