Advertisement
ದೀಪಾವಳಿಯಂದು ಬೆಳಗ್ಗೆಯೇ ಸುಡುಮದ್ದು ಸುಡುವುದು ದಕ್ಷಿಣದ ರಾಜ್ಯಗಳ ಜನರ ಸಂಪ್ರದಾಯವಾಗಿರುವ ಕಾರಣ, ಆದೇಶವನ್ನು ಸಡಿಲಿಸಬೇಕು ಎಂದು ಕೋರಿ ತಮಿಳುನಾಡು ಸರಕಾರ ಸೋಮವಾರ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಪೀಠ, ತಮಿಳುನಾಡು, ಪುದುಚೇರಿ ಸೇರಿದಂತೆ ರಾಜ್ಯಗಳಲ್ಲಿ ತಮಗಿಷ್ಟ ಬಂದ ಅವಧಿಯಲ್ಲಿ ಪಟಾಕಿ ಸಿಡಿಸಲು ಅವಕಾಶ ನೀಡುತ್ತಿದ್ದೇವೆ. ಆದರೆ, 2 ಗಂಟೆಯ ಮಿತಿ ಮಾತ್ರ ಮೀರುವಂತಿಲ್ಲ ಎಂದಿತು. ಅಲ್ಲದೆ, ಹಸಿರು ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂಬ ಆದೇಶವು ಕೇವಲ ದಿಲ್ಲಿ-ಎನ್‌ಸಿಆರ್ ಪ್ರದೇಶಗಳಿಗೆ ಸೀಮಿತವಾಗಿದ್ದು, ಇತರೆ ರಾಜ್ಯಗಳಿಗೆ ಅದು ಅನ್ವಯಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿತು. Advertisement
ಸುಪ್ರೀಂ ಪಟಾಕಿ ಆದೇಶ: ತಮಿಳುನಾಡಿಗೆ ರಿಲ್ಯಾಕ್ಸ್
09:30 AM Oct 31, 2018 | Karthik A |
Advertisement
Udayavani is now on Telegram. Click here to join our channel and stay updated with the latest news.