ಹೊಸದಿಲ್ಲಿ: ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯನ್ನು ಸುಸ್ಥಿತಿಯಲ್ಲಿ ಇರಿಸಲು ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಣದಲ್ಲಿ ಇರಿಸುವ ಅಗತ್ಯವಿದೆ. ಹೀಗೆಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅಭಿಪ್ರಾಯಪಟ್ಟಿದ್ದಾರೆ.
ಒಂದು ನಿರ್ದಿಷ್ಟ ಅಜೆಂಡಾ ಇರಿಸಿಕೊಂಡು ವೈಯಕ್ತಿಕ ದಾಳಿ ನಡೆಸುವುದು ಅಪಾಯ ಎಂದೂ ಹೇಳಿದ್ದಾರೆ.
ಪ್ರವಾದಿ ಮೊಹಮ್ಮದ್ ವಿರುದ್ಧ ಅವಮಾನ ಖಂಡಿಸಿ ದೇಶದಲ್ಲಿ ನಡೆದಿದ್ದ ಹಿಂಸಾ ಚಾರ ನಡೆಯಲು ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಕಾರಣ ಎಂದು ಟೀಕಿಸಿದ್ದ ನ್ಯಾಯಪೀಠದಲ್ಲಿ ನ್ಯಾ| ಪರ್ದಿವಾಲಾ ಕೂಡ ಇದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನ್ಯಾಯದಾನ ಪ್ರಕ್ರಿಯೆಯಲ್ಲಿ ಡಿಜಿಟಲ್ ಮಾಧ್ಯಮ ವಿನಾ ಕಾರಣ ಅಡ್ಡಿ ಉಂಟು ಮಾಡುತ್ತಿದೆ ಎಂದರು.
ಕೆಲವೊಂದು ಬಾರಿ “ಲಕ್ಷ್ಮಣ ರೇಖೆ’ ಮೀರುವುದು ಆತಂಕ ಉಂಟು ಮಾಡುತ್ತದೆ ಎಂದಿದ್ದಾರೆ. ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ವಿಶಿಷ್ಟವಾದ ಪಾತ್ರ ವಹಿಸುವ ನ್ಯಾಯಾಂಗ ವ್ಯವ ಸ್ಥೆಯ ಪ್ರತಿಯೊಂದು ಅಂಶಕ್ಕೂ ರಾಜಕೀಯ ಲೇಪನ ಮಾಡುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಇಂಥ ಪರಿಸ್ಥಿತಿ ನಿರ್ಮಾಣವಾದಾಗ ಹೇಗೆ ತೀರ್ಪು ನೀಡಬೇಕು ಎಂಬ ಬಗ್ಗೆ ನ್ಯಾಯ ಮೂರ್ತಿಗಳು ದ್ವಂದ್ವಕ್ಕೆ ಒಳಗಾಗುವ ಆತಂಕವಿದೆ ಎಂದಿದ್ದಾರೆ ನ್ಯಾ| ಜೆ.ಬಿ. ಪರ್ದಿವಾಲಾ.