ನವದೆಹಲಿ : ಏಕನಾಥ್ ಶಿಂಧೆ ಮತ್ತು ಇತರ 15 ಬಂಡಾಯ ಶಾಸಕರ ವಿರುದ್ಧ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್ವಾಲ್ ಅವರು ಅನರ್ಹತೆ ನೋಟಿಸ್ ನೀಡಿದ್ದರ ವಿರುದ್ಧ ಬಂಡಾಯ ಶಾಸಕರು ಸಲ್ಲಿಸಿದ ಮನವಿಯ ಮೇರೆಗೆ ಉಪ ಸ್ಪೀಕರ್, ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ, ಕೇಂದ್ರ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.
ಶಿವಸೇನೆ ಮುಖಂಡರಾದ ಅಜಯ್ ಚೌಧರಿ, ಸುನೀಲ್ ಪ್ರಭು ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಐದು ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ಜುಲೈ 11 ರಂದು ಸುಪ್ರೀಂ ಕೋರ್ಟ್ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಿದೆ.
ಉದ್ಧವ್ ಠಾಕ್ರೆ ಗುಂಪಿನ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸ್ಪೀಕರ್ ಈ ವಿಷಯವನ್ನು ನಿರ್ಧರಿಸುವಾಗ ಸಂವಿಧಾನದ 212 ನೇ ವಿಧಿಯು ನ್ಯಾಯಾಲಯದ ಪರಿಶೀಲನೆಯನ್ನು ತಡೆಯುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಎಲ್ಲಾ ಆಂತರಿಕ ನಿರ್ವಹಣೆಯನ್ನು ನ್ಯಾಯಾಂಗ ಪರಿಶೀಲನೆಯಿಂದ ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸದನದ ಮುಂದೆ ಸ್ಪೀಕರ್ ನೋಟಿಸ್ ಹಾಕಲು 14 ದಿನಗಳ ಸಮಯ ಎಂದು ಸುಪ್ರೀಂ ಹೇಳಿದ್ದು,. ಇಲ್ಲಿ 179ನೇ ವಿಧಿಯಡಿ ನಿರ್ಣಯ ಮಂಡಿಸುವಂತೆ ಶಾಸಕರು ನೋಟಿಸ್ ನೀಡಿದ್ದಾರೆ.
ಉಪಸಭಾಪತಿ ಪರವಾಗಿ ಹಾಜರಾದ ಹಿರಿಯ ವಕೀಲ ರಾಜೀವ್ ಧವನ್ ಅವರು, ನೋಟೀಸ್ ಸತ್ಯಾಸತ್ಯತೆಯನ್ನು ಪರಿಶೀಲಿಸಿಲ್ಲ ಎಂದು ಸ್ಪೀಕರ್ ತಿರಸ್ಕರಿಸಿದ್ದಾರೆ ಎಂದು ಕೋರ್ಟ್ ಗೆ ಹೇಳಿದ್ದಾರೆ.
ಇದನ್ನೂ ಓದಿ : ರಾವುತ್ ಗೆ ಇಡಿ ಸಮನ್ಸ್; ತಲೆ ಕಡಿದರೂ ಗುವಾಹಟಿಯತ್ತ ಬರುವುದಿಲ್ಲ !