Advertisement

Supreme Court ವೈಫೈ ಸೌಲಭ್ಯ; ಕಾಗದ, ಪುಸ್ತಕವೂ ಡಿಜಿಟಲ್‌

12:43 AM Jul 04, 2023 | Team Udayavani |

ಹೊಸದಿಲ್ಲಿ: ದೇಶದ ಸರ್ವೋಚ್ಚ ನ್ಯಾಯಾಲಯವೂ ಡಿಜಿಟಲೀಕರಣದತ್ತ ಮುಖಮಾಡಿದ್ದು, ಸುಪ್ರೀಂ ಕೋರ್ಟ್‌ ನ ಮೊದಲ 5 ಕೋರ್ಟ್‌ ರೂಮ್‌ಗಳಲ್ಲಿ ವೈಫೈ ಸೌಲಭ್ಯ ಒದಗಿಸಿರುವುದಾಗಿ ಸಿಜೆಐ ಡಿ.ವೈ.ಚಂದ್ರಚೂಡ್‌ ಸೋಮವಾರ ತಿಳಿಸಿದ್ದಾರೆ.

Advertisement

ಅಲ್ಲದೇ ಈ ಎಲ್ಲ ಕೊಠಡಿಗಳಲ್ಲಿ ಇನ್ನು ಮುಂದೆ ಕಾಗದ, ಪುಸ್ತಕಗಳ ಬದಲಾಗಿ ಡಿಜಿಟಲ್‌ ಸೇವೆಗಳನ್ನೇ ಆಧರಿಸಲಾಗುವುದು ಎಂಬುದಾಗಿಯೂ ತಿಳಿಸಿದ್ದಾರೆ.

ಡಿಜಿಟಲೀಕರಣದ ಭಾಗವಾಗಿ ಈ ನೂತನ ಬದಲಾವಣೆ ಯನ್ನು ಘೋಷಿಸಲಾಗಿದೆ. ಇನ್ನು ಮುಂದೆ 1ರಿಂದ 5ನೇ ಕೋರ್ಟ್‌ ರೂಮ್‌ವರೆಗೆ, ಬಾರ್‌ ರೂಮ್‌ಗಳಲ್ಲಿ ವೈಫೈ ಲಭ್ಯ ವಿರುತ್ತದೆ. ಜತೆಗೆ ಕೋರ್ಟ್‌ ಆವರಣ ಪ್ರವೇಶಿಸುವ ಎಲ್ಲ ವಕೀಲರಿಗೆ, ಮಾಧ್ಯಮದವರಿಗೆ, ಅರ್ಜಿದಾರರಿಗೆ ಹಾಗೂ ಕೋರ್ಟ್‌ ವಿಚಾರಗಳಿಗೆ ಸಂಬಂಧಿಸಿದವರೆಲ್ಲರಿಗೂ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಸೌಲಭ್ಯವನ್ನು ಪಡೆದುಕೊಂಡು, ಬಳಿಕ ಅದು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಬಗ್ಗೆ ತಿಳಿಸಿ ಎಂಬುದಾಗಿಯೂ ಸಿಜೆಐ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next