Advertisement
ಇದನ್ನೂ ಓದಿ:ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ಕಾಡುತ್ತಿದೆ ಕೋವಿಡ್ ಸೋಂಕು; ಪೋಷಕರಲ್ಲಿ ಹೆಚ್ಚಿದ ಆತಂಕ
ಕಳೆದ ವಾರ ಪಂಜಾಬ್ ನಲ್ಲಿ ಸಂಭವಿಸಿದ ಪ್ರಧಾನಿ ಮೋದಿ ಅವರ ಭದ್ರತಾ ವೈಫಲ್ಯದ ಕುರಿತು ನಡೆಸಲಿರುವ ಸ್ವತಂತ್ರ ತನಿಖಾ ಸಮಿತಿಯಲ್ಲಿ ಚಂಡೀಗಢದ ಡಿಜಿಪಿ, ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಐಜಿ, ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ ರಿಜಿಸ್ಟ್ರಾರ್ ಜನರಲ್, ಪಂಜಾಬ್ ನ ಎಡಿಜಿಪಿ ಇರಲಿದ್ದಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಶುಕ್ರವಾರ ನಡೆದಿದ್ದ ಈ ಕುರಿತ ವಿಚಾರಣೆ ವೇಳೆ ನ್ಯಾಯಪೀಠವು ಪ್ರಧಾನಿಯ ಪಂಜಾಬ್ ಪ್ರವಾಸ ಮತ್ತು ಭದ್ರತೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಶಪಡಿಸಿಕೊಂಡು ಸುರಕ್ಷಿತವಾಗಿಡುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗೆ ಸೂಚಿಸಿತ್ತು. ಅಲ್ಲದೇ ಜ.10ರಂದು ತಾನು ವಿಚಾರಣೆ ನಡೆಸುವವರೆಗೆ ತನಿಖೆ ನಿಲ್ಲಿಸಬೇಕೆಂದು ಕೇಂದ್ರ ಮತ್ತು ಪಂಜಾಬ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.