Advertisement

August 11 ರ NEET-PG ಪರೀಕ್ಷೆ ಮುಂದೂಡುವಂತೆ ಅರ್ಜಿ: ಸುಪ್ರೀಂನಿಂದ ವಜಾ

07:10 PM Aug 09, 2024 | Team Udayavani |

ಹೊಸದಿಲ್ಲಿ: ಆಗಸ್ಟ್ 11ಕ್ಕೆ ನಿಗದಿಯಾಗಿದ್ದ NEET-PG ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ(ಆಗಸ್ಟ್ 9) ವಜಾ ಮಾಡಿದೆ.

Advertisement

ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಅಭ್ಯರ್ಥಿಗಳಿಗೆ ತಲುಪಲು ಹೆಚ್ಚು ಅನನುಕೂಲವಾಗಿರುವ ನಗರಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗಿತ್ತು.

ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು 5 ವಿದ್ಯಾರ್ಥಿಗಳಿಗಾಗಿ 2 ಲಕ್ಷ ವಿದ್ಯಾರ್ಥಿಗಳ ವೃತ್ತಿಜೀವನವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ. ಇಂತಹ ಪ್ರಮುಖ ಪರೀಕ್ಷೆಯನ್ನು ನಾವು ಹೇಗೆ ಮುಂದೂಡಬಹುದು ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರನ್ನು ಕೇಳಿದೆ.

ಪರೀಕ್ಷೆಯನ್ನು ಮರು ನಿಗದಿಪಡಿಸುವ ಅಗತ್ಯವಿದೆ.  ಏಕೆಂದರೆ ಬೆಳಗ್ಗೆ ಒಂದು ಮತ್ತು ಮಧ್ಯಾಹ್ನ ಒಂದು ಪರೀಕ್ಷೆ ಇದ್ದು, ಅನೇಕ ಅಭ್ಯರ್ಥಿಗಳಿಗೆ ತಲುಪಲು ಅನಾನುಕೂಲವಾಗಿರುವ ನಗರಗಳನ್ನು ಹಂಚಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next