Advertisement

27 ವಾರಗಳ ಗರ್ಭಪಾತಕ್ಕೆ ಅನುಮತಿ ನಿರಾಕರಣೆ

10:26 AM Mar 28, 2017 | Karthik A |

ನವದೆಹಲಿ: ಪ್ರಕರಣವೊಂದರಲ್ಲಿ 6 ತಿಂಗಳ ಗರ್ಭಿಣಿಯ ಗರ್ಭಪಾತಕ್ಕೆ ಸುಪ್ರೀಂಕೋರ್ಟ್‌ ಅನುಮತಿ ನಿರಾಕರಿಸಿದೆ. ಆಕೆಯ ದೈಹಿಕ ಪರಿಸ್ಥಿತಿ ಪೂರಕವಾಗಿಲ್ಲದ ಕಾರಣ ಸುಪ್ರೀಂಕೋರ್ಟ್‌ ಈ ತೀರ್ಮಾನಕ್ಕೆ ಬಂದಿದೆ. ಪ್ರಕರಣದಲ್ಲಿ ಮಹಿಳೆ ಕುರಿತ ವೈದ್ಯಕೀಯ ವರದಿಯನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌.ಎ.ಬೊಬೆx ಮತ್ತು ನ್ಯಾ.ಎಲ್‌.ನಾಗೇಶ್ವರ ರಾವ್‌ ಅವರಿದ್ದ ನ್ಯಾಯಪೀಠದ ಅವಗಾಹನೆಗೆ ತರಲಾಗಿತ್ತು. ಅದರಂತೆ ಒಂದು ವೇಳೆ ಗರ್ಭಪಾತಕ್ಕೆ ಎಡೆ ಮಾಡಿದರೆ, ಮಗು ಜೀವಂತವೇ ಇರಬಹುದು.ಆದರೆ ಗರ್ಭಪಾತಕ್ಕೆ ಮಹಿಳೆಯ ದೈಹಿಕ ಪರಿಸ್ಥಿತಿ ಸೂಕ್ತವಿಲ್ಲ ಎಂದು ಹೇಳಲಾ ಗಿತ್ತು. ಮಹಿಳೆ ಗರ್ಭದಲ್ಲಿರುವ ಮಗು ಅನೇಕ ದೈಹಿಕ ನೂನ್ಯತೆಗಳನ್ನು ಹೊಂದಿದ್ದರಿಂದ ಆಕೆಯ ಗರ್ಭಪಾತಕ್ಕೆ ಸುಪ್ರೀಂ ಮೆಟ್ಟಿಲೇರಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next