ನವದೆಹಲಿ: ಬಕ್ರೀದ್ ಆಚರಣೆಗಾಗಿ ಕೇರಳ ಸರ್ಕಾರ ಕೊರೊನಾ ನಿಯಮಗಳನ್ನು ಸಡಿಸಿಲಿದ್ದಕ್ಕೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸದ್ಯದ ಪರಿಸ್ಥಿತಿಯಲ್ಲಿ “ಬದುಕುವ ಹಕ್ಕು’ ಎಂಬುದನ್ನು ಅನುಷ್ಠಾನಗೊಳಿಸಬೇಕೇ ಹೊರತು ಯಾರಧ್ದೋ ಒತ್ತಡಕ್ಕೆ ಮಣಿಯುವುದಲ್ಲ ಎಂದು ರಾಜ್ಯ ಸರ್ಕಾರವನ್ನು ಉದ್ದೇಶಿಸಿ ಹೇಳಿದೆ.
ಪಿಣರಾಯಿ ವಿಜಯನ್ ಸರ್ಕಾರ ನಿಯಮ ಸಡಿಲಿಕೆ ಮಾಡಿದ್ದನ್ನು ಪ್ರಶ್ನಿಸಿ ಇಂಡಿಯನ್ ಮೆಡಿಕಲ್ ಎಸೋಸಿಯೇಷನ್ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿತ್ತು. ವಿಚಾರಣೆ ನಡೆಸಿದ ನ್ಯಾ.ಆರ್.ಎಫ್.ನಾರಿಮನ್ ನೇತೃತ್ವದ ನ್ಯಾಯಪೀಠ, ನಿಯಮ ಸಡಿಲಿಕೆಯಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಯಾರಾದರೂ ಅರಿಕೆ ಮಾಡಿಕೊಂಡಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ಇದನ್ನೂ ಓದಿ :ಜೈಶ್ ವಿರುದ್ಧ ತನಿಖೆ ನಡೆಸಿ : ಪಾಕಿಸ್ತಾನಕ್ಕೆ ಅಮೆರಿಕ ಸೂಚನೆ
ಹಬ್ಬದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದು ನಿಯಮ ಸಡಿಲಿಕೆ ಮಾಡಿದ್ದು, ಸರ್ಕಾರ ಹೊಂದಿರುವ ಆಡಳಿತ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ ಎಂದು ನ್ಯಾಯಪೀಠ ಕಟುವಾಗಿ ಆಕ್ಷೇಪ ವ್ಯಕ್ತಪಡಿಸಿದೆ.