ಹೊಸದಿಲ್ಲಿ: ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ಗಣಿಗಾರಿಕೆ ಮಾಡಿರುವ ಕಬ್ಬಿಣದ ಅದಿರನ್ನು ರಫ್ತು ಮಾಡಲು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.
ರಫ್ತು ನಿರ್ಬಂಧ ತೆರವಿಗಾಗಿ ಗಣಿ ಮಾಲಕರು ಮಾಡಿದ್ದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದ ಪೀಠ ನಿಷೇಧವನ್ನು ತೆರವು ಮಾಡಿದೆ. ಆದರೆ ಸಂಬಂಧಪಟ್ಟ ಪ್ರಾಧಿಕಾರಗಳ ಷರತ್ತುಗಳನ್ನು ತಪ್ಪದೇ ಪಾಲಿಸಬೇಕು ಎಂಬ ಸೂಚನೆಯನ್ನೂ ಗಣಿ ಮಾಲಕರಿಗೆ ನೀಡಿದೆ.
ಹೊಸದಾಗಿ ಗಣಿಗಾರಿಕೆ ಮಾಡಲು ಅನುಮತಿ ನೀಡಿಲ್ಲ. ಆದರೆ ಈಗಾಗಲೇ ಯಾವುದನ್ನು ಮಾಡಿ, ಸಂಗ್ರಹದಲ್ಲಿ ಉಳಿದಿದೆಯೋ ಅದನ್ನು ಮಾತ್ರ ಕೇಂದ್ರ ಸರಕಾರದ ನೀತಿಗಳಿಗೆ ಅನುಗುಣವಾಗಿ ರಫ್ತು ಮಾಡಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಚಿತ್ರಾ ರಾಮಕೃಷ್ಣ ಕೇಸ್: ಸಿಬಿಐಗೆ ನೋಟಿಸ್ ನೀಡಿದ ದೆಹಲಿ ಹೈಕೋರ್ಟ್
ಇ-ಹರಾಜು ಮಾಡದೇ ನೇರ ಒಪ್ಪಂದದಡಿ ಮಾರಾಟ ಮಾಡಲೂ ಕೋರ್ಟ್ ಅನುಮತಿ ನೀಡಿದೆ. ಕಬ್ಬಿಣದ ಅದಿರು ರಫ್ತಿಗೆ 2012ರಲ್ಲಿ ಸುಪ್ರೀಂ ಕೋರ್ಟ್ ನಿಷೇಧ ಹೇರಿತ್ತು.