ಸಿಎಎ ವಿರೋಧಿಸಿ ಶಹೀನ್ಭಾಗ್ ಪ್ರತಿಭಟನೆ ಕುರಿತಾಗಿ ತನ್ನ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯೊಂದನ್ನು ತಿರಸ್ಕರಿಸಿದ ಅದು, ಪ್ರತಿಭಟನೆಯ ಹಕ್ಕು ಇದೆ ಎಂಬ ಕಾರಣಕ್ಕಾಗಿ ಇತರರ ಹಕ್ಕುಗಳಿಗೆ ಅಡಚಣೆಯಾಗುವಂತೆ ಸಾರ್ವಜನಿಕ ಸ್ಥಳವನ್ನು ಸುದೀರ್ಘ ಅವಧಿ ಆಕ್ರಮಿಸಿ ಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದಿತು.
ನ್ಯಾಯಮೂರ್ತಿಗಳಾದ ಸಂಜಯ್ ಕೌಶಲ್ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠ ಈ ಬಗ್ಗೆ ವಿಚಾರಣೆ ನಡೆಸಿತು. “ಪ್ರತಿಭಟನೆಯ ಹಕ್ಕಿನ ಬಗ್ಗೆ ಕೋರ್ಟ್‌ನ ಹಿಂದಿನ ತೀರ್ಪುಗಳು ಮತ್ತು ಅಭಿಪ್ರಾಯಗಳ ಬಗ್ಗೆ ಗಮನ ಹರಿಸಿದ್ದೇವೆ. ಭಿನ್ನತೆಗಾಗಿ ಪ್ರತಿಭಟನೆಯ ಹಕ್ಕು ಇದೆ ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ ಅದು ಕೆಲವು ಕರ್ತವ್ಯಗಳ ಅಧೀನವಾಗಿದೆ ಎಂಬುದನ್ನು ಮರೆಯಕೂಡದು’ ಎಂದಿತು.
Advertisement
ಎಂಥ ಪ್ರತಿಭಟನೆಯೇ ಆಗಿದ್ದರೂ ಸುದೀರ್ಘ ಅವಧಿಗೆ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಳ್ಳುವಂತಿಲ್ಲ. ಇದರಿಂದ ಬೇರೆಯವರ ಹಕ್ಕುಗಳಿಗೆ ತೊಂದರೆ ನೀಡಿದಂತೆ ಆಗುತ್ತದೆ ಎಂದಿತು. ಅ. 7ರಂದು ತೀರ್ಪು ನೀಡಿದ್ದ ಕೋರ್ಟ್, ಶಹೀನ್‌ಭಾಗ್ ನಲ್ಲಿ ದೀರ್ಘ ಪ್ರತಿಭಟನೆ ಸ್ವೀಕಾರಾರ್ಹವಲ್ಲ ಎಂದಿತ್ತು.