Advertisement

ಮೀಸಲಾತಿ ಹೋರಾಟ ಬೆಂಬಲಿಸಿ

01:59 PM Dec 22, 2020 | Suhan S |

ಕೊಳ್ಳೇಗಾಲ: ರಾಜನಹಳ್ಳಿಯಲ್ಲಿ ಫೆಬ್ರವರಿ 8 ಮತ್ತು 9ರಂದು ನಡೆಯುವ ವಾಲ್ಮೀಕಿ ಜಾತ್ರೆಗೆಸಮುದಾಯದವರು ಆಗಮಿಸಿ ಶೇಕಡ 7.5ರ ಮೀಸಲಾತಿ ಹೋರಾಟಕ್ಕೆ ಬೆಂಬಲಿಸಬೇಕುಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮನವಿ ಮಾಡಿದರು.

Advertisement

ಪಟ್ಟಣದ ದಕ್ಷಿಣ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ನಾಯಕರ ಸಮುದಾಯ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದಅವರು, ಪಟ್ಟಣದಲ್ಲಿ ಸುಸಜ್ಜಿತ ನಾಯಕರಭವನ ನಿರ್ಮಾಣವಾಗುತ್ತಿದ್ದು, ಸರ್ಕಾರಹೆಚ್ಚುವರಿ ಅನುದಾನ ನೀಡಿದರೆ ಭವನ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಶಾಸಕ ಎನ್‌.ಮಹೇಶ್‌ ಮಾತನಾಡಿ, ಎಸ್ಸಿ, ಎಸ್ಟಿ ಅನುದಾನವನ್ನು ಬೇರೆ ಇಲಾಖೆಗೆ ವರ್ಗಾಯಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ನಾಯಕರ ಭವನಕ್ಕೆ ಈಗಾಗಲೇ 50 ಲಕ್ಷ ರೂ.ಅನುದಾನಕ್ಕೆ ಭರವಸೆ ನೀಡಲಾಗಿದ್ದು,ಶಾಸಕರುಹಾಗೂಸಂಸದರ ನಿಧಿಯಿಂದಭವನ ಕಾಮಗಾರಿಯನ್ನು ಪೂರ್ಣಗೊಳಿಸಲಾಗು ವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಯಕರ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಲಿಂಗಯ್ಯ, ಕಾರ್ಯದರ್ಶಿ ಶಾಂತರಾಜು, ಮುಖಂಡರಾದ ಎಚ್‌.ಎಂ.ಮಹದೇವಪ್ಪ, ಲೋಕೇಶ್‌, ಕುನ್ನನಾಯಕ, ಶಾಂತರಾಜು, ಚಿಕ್ಕಮಾಧು, ಜಗದೀಶ್‌ ನಾಯಕ, ಮಲ್ಲನಾಯಕ ಇತರರಿದ್ದರು.

ಕಾಡುಹಂದಿ ದಾಳಿ: ಪರಂಗಿ ಗಿಡಗಳು ಧ್ವಂಸ  :

Advertisement

ಹನೂರು: ಕಾಡು ಹಂದಿ ದಾಳಿಗೆ ಸಾವಿರಕ್ಕೂ ಅಧಿಕ ಪರಂಗಿ ಹಣ್ಣಿನ ಗಿಡಗಳು ಧ್ವಂಸಗೊಂಡಿರುವ ಘಟನೆ ತಾಲೂಕಿನ ಗೊರೆಯೂರು ಗ್ರಾಮದಲ್ಲಿ ಜರುಗಿದೆ.

ತಾಲೂಕಿನ ತೋಮಿಯರ್‌ ಪಾಳ್ಯ ಗ್ರಾಮದಪಾಪತ್ತಿಕೋಂ ಸ್ವಾಮಿಅತ್ತಳ್‌ ಎಂಬಾಕೆಯಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಿದ್ದು,ಪರಂಗಿ ಹಣ್ಣಿನ ಗಿಡಗಳನ್ನು ಬೆಳೆಸಲಾಗಿತ್ತು. ರಾತ್ರಿಕಾಡು ಹಂದಿಗಳ ಹಿಂಡುಜಮೀನಿಗೆ ಲಗ್ಗೆಯಿಟ್ಟಿದ್ದು, ಸುಮಾರು1ಸಾವಿರಕ್ಕೂ ಅಧಿಕ ಪರಂಗಿ ಗಿಡಗಳನ್ನು ನಾಶಪಡಿಸಿವೆ.ಕಾಡು ಹಂದಿ ದಾಳಿಯಿಂದ50 ಸಾವಿರ ರೂ. ನಷ್ಟ ಸಂಭವಿಸಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರೈತಕುಮಾರ್‌ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next