Advertisement

ರಾಗಿಗೆ 3,150 ರೂ.ಬೆಂಬಲ ಬೆಲೆ

04:38 PM Dec 09, 2019 | Suhan S |

ಕೋಲಾರ: ಜಿಲ್ಲೆಯಲ್ಲಿ 6 ಖರೀದಿ ಕೇಂದ್ರ ತೆರೆದು ಪ್ರತಿ ಕ್ವಿಂಟಾಲ್‌ಗೆ 3150 ರೂ. ಬೆಂಬಲ ಬೆಲೆ ನೀಡಿ ರೈತರಿಂದ ರಾಗಿ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ತಿಳಿಸಿದರು.

Advertisement

ಉತ್ತಮ ರಾಗಿ ನಿರೀಕ್ಷೆ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಿಷ್ಠ ಬೆಂಬಲ ಬೆಲೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ರಾಗಿ ಉತ್ತಮವಾಗಿ ಬೆಳೆದಿದ್ದು ಉತ್ತಮ ಇಳುವರಿಯನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಉತ್ತಮವಾಗಿ ಪ್ರಚಾರ ಮಾಡಿ: ಈ ಬಾರಿ ರಾಗಿ 1 ಲಕ್ಷಕ್ಕಿಂತ ಹೆಚ್ಚಿನ ದಾಸ್ತಾನು ಶೇಖರಣೆಗೂಳ್ಳುವ ನಿರೀಕ್ಷೆ ಇದೆ. ಹೀಗಾಗಿ ರೈತರಿಗೆ ರಾಗಿ ಖರೀದಿ ಬಗ್ಗೆ ಉತ್ತಮ ಪ್ರಚಾರ ಮಾಡಿ ಮಾಹಿತಿ ತಲುಪಿಸಬೇಕು ಎಂದು ಸಲಹೆ ನೀಡಿದರು.

ವ್ಯವಸ್ಥಿತವಾಗಿ ಸಂರಕ್ಷಣೆ ಮಾಡಿ: ಕಳೆದವರ್ಷ 2,897 ರೂ. ಬೆಂಬಲ ಬೆಲೆ ನೀಡಲಾಗಿತ್ತು. ಈ ಬಾರಿ ಉತ್ತಮ ಬೆಲೆಯನ್ನು ನೀಡಿ ಖರೀದಿಸಲಾಗುತ್ತಿದೆ ಎಂದು ತಿಳಿಸಿದ ಅವರು, ದಾಸ್ತಾನು ಮಳಿಗೆಗಳಲ್ಲಿ ಖರೀದಿಸಿದ ರಾಗಿಯನ್ನು ವ್ಯವಸ್ಥಿತವಾಗಿ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಸ್ಥಳ ಗುರುತಿಸಿ ನನ್ನ ಗಮನಕ್ಕೆ ತನ್ನಿ: ಕೋಲಾರ ಇಲ್ಲಿಯವರೆಗೆ ಬರಪೀಡಿತ ಜಿಲ್ಲೆಯಾಗಿತ್ತು. ಆದರೆ, ಕೆ.ಸಿ.ವ್ಯಾಲಿ ನೀರು ಜಿಲ್ಲೆಯ ಕೆರೆಗಳಿಗೆ ಹರಿಸಿರುವುದರಿಂದ ರೈತರು ಭತ್ತ ಹಾಗೂ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ. ಜಿಲ್ಲೆಯಲ್ಲಿ ದಾಸ್ತಾನು ಮಳಿಗೆಗಳ ಕೊರತೆ ಇರುವುದರಿಂದ ಪ್ರತಿ ತಾಲೂಕಿನಲ್ಲಿಯೂ ಮುಂದಿನ ದಿನಗಳಲ್ಲಿ ದಾಸ್ತಾನು ಸಂಗ್ರಹಣೆಗೆ ತೊಂದರೆಯಾಗದಂತೆ ದಾಸ್ತಾನು ಮಳಿಗೆಗಳನ್ನು ನಿರ್ಮಾಣ ಮಾಡಬೇಕು. ಅದಕ್ಕೆ ಸ್ಥಳ ಗುರುತಿಸಿ ತನ್ನ ಗಮನಕ್ಕೆ ತನ್ನಿ. ಎಪಿಎಂಸಿ ಅವರು ರಾಗಿ ಸಂಗ್ರಹಣೆಗೆ ದಾಸ್ತಾನು ಮಳಿಗೆಯನ್ನು ನೀಡಬೇಕು ಎಂದರು.

Advertisement

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಎಚ್‌.ವಿ. ದರ್ಶನ್‌, ಅಪರ ಜಿಲ್ಲಾಧಿಕಾರಿ ಎಚ್‌. ಪುಷ್ಪಲತಾ, ಉಪವಿಭಾಗಾ ಧಿಕಾರಿ ಸೋಮ್‌ಶೇಖರ್‌, ಉಪ ಕಾರ್ಯದರ್ಶಿ ಸಂಜೀವಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next