Advertisement

ಅಂಗನವಾಡಿ ಕೇಂದ್ರ ಬಲವರ್ಧನೆಗೆ ಕಾಯಕಲ್ಪ

03:39 PM Aug 25, 2021 | Team Udayavani |

ಬೆಂಗಳೂರು: ಗ್ರಾಮೀಣ ಭಾಗದಲ್ಲಿನ ಅಂಗನವಾಡಿ ಕೇಂದ್ರಗಳ ಬಲವರ್ಧನೆಗೆ ಕಾಯಕಲ್ಪ ನೀಡಲು ಮುಂದಾಗಿರುವ ಸರ್ಕಾರ, ಅಂಗನವಾಡಿ
ಕೇಂದ್ರಗಳತ್ತ ಮುಖ ಮಾಡಲು ಗ್ರಾಮ ಪಂಚಾಯಿತಿಗಳಿಗೆ ಹೇಳಿದೆ.

Advertisement

ಗ್ರಾಮ ಪಂಚಾಯಿತಿಗಳ ಮೂಲಕ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸುವ ಬಗ್ಗೆ ಯೋಜನೆ ಹಾಕಿಕೊಂಡಿರುವ ಗ್ರಾಮೀಣಾಭಿವೃದ್ಧಿ ಹಾಗೂ
ಪಂಚಾಯತ್‌ರಾಜ್‌ ಇಲಾಖೆ ವಿಕೇಂದ್ರೀಕರಣ ವಿಧಾನದ ಮೂಲಕ ಅಂಗನವಾಡಿ ಕೇಂದ್ರಗಳು ಮತ್ತು ಗ್ರಾಮ ಪಂಚಾಯಿತಿಗಳ ನಡುವೆ
“ಬಲವರ್ಧನೆಯ ಬಾಂಧವ್ಯ’ ಬೆಸೆಯುತ್ತಿದೆ.

ಅಂಗನವಾಡಿ ಕೇಂದ್ರಗಳನ್ನು ಮಾದರಿ ಕೇಂದ್ರಗಳನ್ನಾಗಿ ಉನ್ನತೀಕ ‌ರಿಸಲು ಗ್ರಾಮ ಪಂಚಾಯಿತಿಗಳ ಪಾತ್ರದ ‌ ಬಗ್ಗೆ ಸರ್ಕಾರದ ವತಿಯಿಂದ ನೆರವು ಹಾಗೂ ಮಾರ್ಗದರ್ಶನ ನೀಡಲು ತೀರ್ಮಾಸಲಾಗಿದ್ದು,ಈ ಉದ್ದೇಶಕ್ಕಾಗಿ ಗ್ರಾಮ ಪಂಚಾಯಿತಿಗಳು ಅಂಗನವಾಡಿ ಕೇಂದ್ರಗಳತ್ತ ಮುಖ ಮಾಡಬೇಕು ಎಂದು ಸರ್ಕಾರದ ಆಶಯವಾಗಿದೆ.

ಸರ್ಕಾರದ ಯೋಜನೆಯಂತೆ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿಯ ಅಧ್ಯಯನ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಗ್ರಾಪಂ ಅಧ್ಯಕ್ಷರು,
ಉಪಾಧ್ಯಕ್ಷರು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ಕಾಲ ಕಾಲಕ್ಕೆ ಅಥವಾ ಕನಿಷ್ಠ ಮೂರು ತಿಂಗಳಿಗೊಮ್ಮೆ ತಮ್ಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದು ಇಲಾಖೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಿದೆ.

ಇದನ್ನೂ ಓದಿ:ಅಂದು ಅಫ್ಘಾನ್ ಸರ್ಕಾರದಲ್ಲಿ ಸಚಿವ, ಇಂದು ಜರ್ಮನಿ ಬೀದಿಯಲ್ಲಿ ಪಿಜ್ಜಾ ಮಾರುತ್ತಿದ್ದಾರೆ!

Advertisement

ಅಂಗನವಾಡಿ ಕೇಂದ್ರಗಳಿಗೆ ಭೇಟಿ ಕೊಟ್ಟು ಅಲ್ಲಿನ ಮೇಲ್ವಿಚಾರಕರು, ತಾಯಂದಿರು ಹಾಗೂ ಮಕ್ಕಳೊಂದಿಗೆ ಸಮಾಲೋಚಿಸಿ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಮಕ್ಕಳು ಅಂಗನವಾಡಿಗಳಿಗೆ ತಪ್ಪದೇ ಸೇರ್ಪಡೆಯಾಗಲು ಮತ್ತು ನಿತರಂತವಾಗಿ ಹಾಜರಾಗಲು ಹಾಗೂ ಅಲ್ಲಿನ ಸೌಲಭ್ಯಗಳನ್ನು ಪಡೆದುಕೊಳ್ಳಲು ಪೋಷಕರನ್ನು ಮನವೊಲಿಸುವ ಕೆಲಸ ಮಾಡಬೇಕು. ಈ ಉದ್ದೇಶಕ್ಕಾಗಿ ರಚಿಸಲಾಗಿರುವ ಬಾಲ ವಿಕಾಸ ಸಮಿತಿಯಿಂದಲೂ ಮಾಹಿತಿ ಪಡೆಯಬಹುದು. ಈ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ತ್ತೈಮಾಸಿಕ ಕೆಡಿಪಿ ಸಭೆಗಳಲ್ಲಿಯೂ ಚರ್ಚಿಸಿ ಕ್ರಮಕೈಗೊಳ್ಳಬಹುದು.

ರಾಜ್ಯದಲ್ಲಿ ಈಗಾಗಲೇ ಹಲವು ಗ್ರಾಮ ಪಂಚಾಯಿತಿಗಳು ಸ್ವಪ್ರೇರಣೆಯಿಂದ ಅಂಗನವಾಡಿ ಕೇಂದ್ರಗಳನ್ನು ಮಾದರಿ ಕೇಂದ್ರಗಳನ್ನಾಗಿ
ಉನ್ನತೀಕರಿಸಿವೆ. ಇಂತಹ ಯಶೋಗಾಥೆಗಳನ್ನು ಎಲ್ಲಾ ಪಂಚಾಯಿತಿಗಳು ಅನುಸರಿಸಬಹುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ತಿಳಿಸಿದೆ.

ಗ್ರಾಪಂಗಳು ಏನೇನು ಮಾಡಬಹುದು?
ಗ್ರಾಮಾಂತರ ಪ್ರದೇಶದಲ್ಲಿನ ಅಂಗನವಾಡಿ ಕೇಂದ್ರಗಳು ಮಹಿಳೆ ಹಾಗೂ ಮಕ್ಕಳ ಕಲ್ಯಾಣದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿವೆ. ಅಂಗನ
ವಾಡಿಕೇಂದ್ರಗಳಮೂಲಸೌಕರ್ಯಹಾಗೂಇನ್ನಿತರ ಸವಲತ್ತುಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರಾಜ್ಯದಲ್ಲಿ 62,580 ಅಂಗನವಾಡಿಕೇಂದ್ರ ಗಳು, 3,331ಮಿನಿಅಂಗನವಾಡಿಕೇಂದ್ರಗಳಿವೆ.ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ 1993ರ ಪ್ರಕರಣ58ರಲ್ಲಿ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಗ್ರಾಮ ಪಂಚಾಯಿತಿಗಳ ಪ್ರಕಾರ್ಯಗಳಲ್ಲಿ ಒಂದಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ, ಕಟ್ಟಡ, ದಾಸ್ತಾನು ಕೊಠಡಿ, ಅಡುಗೆ ಕೊಠಡಿ, ಕಟ್ಟಡ ದುರಸ್ತಿ, ಕಾಂಪೌಂಡ್‌, ವಿದ್ಯುತ್‌ ಸಂಪರ್ಕ, ವಿದ್ಯುತ್‌ ಬಿಲ್‌ ಪಾವತಿ, ಕುಡಿಯುವ ನೀರು ಸರಬರಾಜು, ಶೌಚಾಲಯ, ಕೈತೋಟ, ಆಟದ ಸಲಕರಣೆ, ಪೌಷ್ಟಿಕ ಆಹಾರ ಪೂರೈಕೆ ಮುಂತಾದ ನೆರವು ಒದಗಿಸಬಹುದು. ಈ ಉದ್ದೇಶಕ್ಕಾಗಿ ಗ್ರಾ.ಪಂ.ಗಳು ಸ್ವಂತ ಸಂಪನ್ಮೂಲ,ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶಾಸನ ಬದ್ಧ ಅನುದಾನ, ಜಲಜೀವನ್‌ ಮಿಷನ್‌, ಉದ್ಯೋಗ ಖಾತರಿ ಮುಂತಾದ ಯೋಜನೆಗಳ ಅನುದಾನ ಬಳಸಿಕೊಳ್ಳಬಹುದು ಎಂದುಇಲಾಖೆ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವ ಮತ್ತು ಮಕ್ಕಳ ಉಜ್ವಲ ಭವಿಷ್ಯದ ದಿಶೆಯಲ್ಲಿ ವಿಕೇಂದ್ರೀಕರಣ ವಿಧಾನದ ಗ್ರಾಪಂ ಹಾಗೂ ಅಂಗನವಾಡಿ ಕೇಂದ್ರಗಳ ನಡುವಿನಈ ಸಂಯೋಜನೆ ಮಾದರಿ ಹೆಜ್ಜೆಯಾಗಲಿದೆ. ಪಂಚಾಯಿತಿಗಳುಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಸುತ್ತೋಲೆ ಹೊರಡಿಸಲಾಗಿದೆ’.
-ಉಮಾ ಮಹಾದೇವನ್‌, ಪ್ರಧಾನ
ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್‌ರಾಜ್‌ ಇಲಾಖೆ

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next