ನಿರ್ಧಾರ ಪ್ರಕಟಿಸುವುದಾಗಿ ಪಕ್ಷೇತರ ಶಾಸಕ ವರ್ತೂರು ಪ್ರಕಾಶ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಂತ ಪಕ್ಷ ಕಟ್ಟುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ಆದರೆ, ಸದ್ಯದ ರಾಜಕೀಯ ಬೆಳವಣಿಗೆ ಗಮನದಲ್ಲಿರಿಸಿಕೊಂಡು ಬೇರೆ ಪಕ್ಷ ಸೇರಬೇಕೋ ಅಥವಾ ಸ್ವಂತ ಪಕ್ಷ ರಚಿಸಬೇಕೋ ಎನ್ನುವ ಬಗ್ಗೆ ಮುಂದಿನ ತಿಂಗಳು ನಿರ್ಧರಿಸಲಾಗುವುದು ಎಂದು ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ನೆರವು ಕಲ್ಪಿಸಿದ್ದಾರೆ. ಅವರು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದರಾದರೂ ಕಾಂಗ್ರೆಸ್ 100 ಸ್ಥಾನ ಗೆಲ್ಲುವುದು ಕಷ್ಟ. ನನ್ನನ್ನು ಪಕ್ಷಕ್ಕೆ
ಬರುವಂತೆ ಅವರು ಕರೆದಿದ್ದು, ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದರು.
Advertisement