Advertisement

CM race; ಬೆಂಬಲಿಗರ ಭಾವನೆಯೇ ಬೇರೆ, ಹೈಕಮಾಂಡ್ ನಿರ್ಧಾರವೇ ಅಂತಿಮ: ಡಾ.ಪರಮೇಶ್ವರ್

12:37 PM Nov 21, 2023 | keerthan |

ವಿಜಯಪುರ: ರಾಜಕೀಯ ವ್ಯವಸ್ಥೆಯಲ್ಲಿ ಬೆಂಬಲಿಗರಿಗೆ ತಮ್ಮ ನಾಯಕ ಉನ್ನತ ಸ್ಥಾನಕ್ಕೆ ಹೋಗಬೇಕು ಎಂಬ ಭಾವನೆ ಇರುತ್ತದೆ. ನಮ್ಮ ಪಕ್ಷದಲ್ಲಿ ಸಾಂದರ್ಭಿಕವಾಗಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವೇ ಬೇರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ.

Advertisement

ಮಂಗಳವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸವದತ್ತಿ ಶಾಸಕ ವೈದ್ಯ ಅವರು ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾಗಬೇಕು ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ನಮ್ಮ ಬೆಂಬಲಿಗರಿಗೆ ರಾಜಕೀಯದಲ್ಲಿ ನಮ್ಮ ನಾಯಕ, ಶಾಸಕ, ಸಂಸದ, ಸಚಿವ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಬೇಕು ಎಂದೆಲ್ಲ ಅನೇಕ ಆಸೆ ಇರಿಸಿಕೊಂಡಿರುತ್ತಾರೆ. ಅವರ ಭಾವನೆಗಳನ್ನು ತಡೆಯಲು ಆಗದು. ಆದರೆ ರಾಜಕೀಯದಲ್ಲಿ ವಾಸ್ತವಿಕ ವ್ಯವಸ್ಥೆಯೇ ಬೇರೆ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದರು.

ಇದನ್ನೂ ಓದಿ:Bengaluru Kambala; ಕೋಣಗಳ ಓಟದ ಕರೆಗೆ ಹೆಸರು ಅಂತಿಮ; ಇದಕ್ಕಿದೆ ಐತಿಹಾಸಿಕ ಹಿನ್ನೆಲೆ

ರಾಜ್ಯದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಭೀಕರ ಬರ ಆವರಿಸಿದೆ. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಕುರಿತು ನಮ್ಮ ಆದ್ಯತೆ ಇದೆಯೇ ಹೊರತು, ಉಪ ಮುಖ್ಯಮಂತ್ರಿ ಸ್ಥಾನಗಳ ಹೆಚ್ಚಳದ‌ ಕುರಿತು ಅಲ್ಲ ಎಂದರು.

ಜನವರಿ ಬಳಿಕ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರತೆ ಪಡೆಯುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.

Advertisement

ಇಂಥ ಗಂಭೀರ, ಜ್ವಲಂತ ಸಮಸ್ಯೆ ಕಣ್ಮುಂದೆ ಇರುವಾಗ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಸ್ಥಾನಗಳ ಬಗ್ಗೆ ಯೋಚನೆ ಮಾಡುವ ಸ್ಥಿತಿ ಇಲ್ಲವೇ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next