ಉಳ್ಳವರು ಶಿವಾಲಯ ಮಾಡುವರು… ಇಲ್ಲದವರು ಅನಾಥಾಲಯ, ಬಡ ನಿರ್ಗತಿಕರ ಸೇವೆಯಲ್ಲೇ ದೇವರನ್ನು ಅರಸುವರು. ಆತ್ಮಬಲ, ಛಲ, ಸಮಾಜಕ್ಕೆ ತನ್ನದಾದ ಒಂದು ಕೊಡುಗೆ, ಅದು ಋಣ ಸಂದಾಯವೇ ಅನ್ನಿ. ಹೀಗೆ ತಮ್ಮ ಜೀವನದಲ್ಲಿ ಸಾರ್ಥಕ್ಯ ಕಂಡುಕೊಳ್ಳುವ ಓರ್ವ ವೈದ್ಯ ದಂಪತಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಸಮೀಪ ದೈಗೋಳಿಯಲ್ಲಿ ಸದ್ದಿಲ್ಲದೆ, ಸುದ್ದಿಗೂ ಗ್ರಾಸವಾಗದೆ ಈ ಕಾಯಕದಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ವೈದ್ಯಕೀಯ ಪದವಿ ಪಡೆದು 2007 ರಲ್ಲೇ ತನ್ನ ಊರಿನ ಜನತೆಯ ಸೇವೆಯಲ್ಲಿ ಆಸ್ಪತ್ರೆ ತೆರೆದು ವೃತ್ತಿ ಪ್ರಾರಂಭಿಸಿದರು.ತಮ್ಮ ಚಿಕಿತ್ಸಾ ಕೇಂದ್ರವನ್ನೇ ಕ್ರಮೇಣ ಸೇವಾ ಕೇಂದ್ರವಾಗಿ ನಿರ್ವಹಣೆ ಮಾಡಿದ್ದು ಅವರ ಮನೋಧಾಡ್ಯìಕ್ಕೆ, ಸಮಾಜಮುಖೀ ಸ್ಪಂದನಕ್ಕೆ ಇಂಬು ಕೊಟ್ಟಿತು.
ಆಯುರ್ವೇದ ವೈದ್ಯೆ ಬೆಳ್ತಂಗಡಿ ಅಳದಂಗಡಿ ಮೂಲದ ಡಾ| ಶಾರದಾ ಅವರನ್ನು ವಿವಾಹವಾದ ಬಳಿಕ ಅವರ ಸಮಾಜ ಸೇವೆಗೆ ಬಲ ಕೂಡಿದ್ದಂತೂ ನಿಜ. ತಮ್ಮ ವೈದ್ಯಕೀಯ ವೃತ್ತಿಯ ಜತೆ ನಿರ್ಗತಿಕರ ಉಚಿತ ಸೇವೆಯನ್ನು ಈ ದಂಪತಿ ಹಚ್ಚಿಕೊಂಡರು.
2007ರಲ್ಲಿ ಸ್ಥಳೀಯ ಸಮಾನ ಮನಸ್ಕರ ಜತೆ ಸೇರಿ ಶ್ರೀ ಸತ್ಯಸಾಯಿ ಸೇವಾ ಪ್ರತಿಷ್ಠಾನ ಎಂಬ ಉಚಿತ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದರು. ಪ್ರಾರಂಭದಲ್ಲಿ 9 ಅನಾಥ ಬಾಲಕರಿಗೆ ಆಶ್ರಯ ನೀಡಿ ಅವರಿಗೆ ಉಚಿತ ಆಹಾರ, ವಿದ್ಯಾಭ್ಯಾಸ,ವಸತಿ ಸೌಕರ್ಯ ಒದಗಿಸಲಾಯಿತು. ಇಂದು ಹೆಮ್ಮರವಾಗಿ ಬೆಳೆದು ಶ್ರೀ ಸಾಯಿನಿಕೇತನವಾಗಿ ಮೈದಳೆ ಯಿತು. ದಾನಿಗಳ ಸಹಕಾರ ದೊಂದಿಗೆ ತಮ್ಮದೇ ಸಂಪಾದನೆ ಯನ್ನೂ ಸೇರಿಸಿ, ತಮ್ಮದೇ ಜಮೀನಿನಲ್ಲಿ ಸುಮಾರು 4000 ಚ.ಅಡಿ ವಿಸ್ತಾರದ ಒಂದು ವಸತಿ ಗೃಹವನ್ನು ನಿರ್ಮಿಸಲಾಯಿತು. ಬರಿಯ ವೃದ್ಧಾಪ್ಯವಷ್ಟೇ ಅಲ್ಲ. ಅಭಯಾರ್ತಿಗಳಿಗೆ, ನಿರ್ಗತಿಕರಿಗೆ, ಬೀದಿ ಪಾಲಾದ ಮಾನಸಿಕ ಸ್ವಾಸ್ಥÂ ಕಳೆದುಕೊಂಡವರಿಗೆ, ಮಾನಸಿಕ, ಸಾಮಾಜಿಕ ಪುನರ್ವಸತಿ ಕೇಂದ್ರವಾಗಿ ಇದು 2016ರಲ್ಲಿ ರೂಪು ಗೊಂಡಿತು. ±ಪ್ರಾಥಮಿಕ ಸಭ್ಯತೆ, ದೈಹಿಕ – ಮಾನಸಿಕ ಚಿಕಿತ್ಸಾವಿಧಿ, ಉತ್ತಮ ಆಹಾರ ಇತ್ಯಾದಿ ನೀಡಲಾಗಿ ಆಶ್ರದಲ್ಲಿ ನೆಲೆಕಂಡುಕೊಂಡವರು ಕ್ರಮೇಣ ಚೇತರಿಕೆ ಕಂಡುಕೊಂಡರು. ಮಾನಸಿಕ ಸಮತೋಲನ ಕಂಡುಕೊಂಡಾಗ 6 ಮಂದಿ ಹೆಂಗಸರನ್ನು, ಅವರ ಹೆತ್ತವರ, ಪೋಷಕರ ಸಂಪರ್ಕಗಳಿಸಿ ಮತ್ತೆ ತಮ್ಮೂರಿಗೆ ಕಳಿಸಿಕೊಡಲಾಗಿದೆ.ಈಗ ಈ ಪುನರ್ವತಿ ಕೇಂದ್ರದಲ್ಲಿ 80ಕ್ಕೂ ಮಿಕ್ಕ ವಯಸ್ಸಿನ ಮುದುಕಿಯರೂ ಬಾಳುತ್ತಿದ್ದಾರೆ. ಪರಿಚರಣೆ ಪಡೆಯುತ್ತಿದ್ದಾರೆ. ನೆಲ ಅಂತಸ್ತಿನಲ್ಲಿರುವ ವಸತಿ ಗೃಹದಲ್ಲಿ ಸುಮಾರು 40 ಮಂದಿ ಯುವತಿಯರು, ವೃದ್ಧೆಯರು ಇದ್ದಾರೆ. ದೂರದ ನೇಪಾಳದಿಂದ, ಮಧ್ಯ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳದಿಂದ ಮಾತ್ರವಲ್ಲದೆ ಸಮೀಪದ ನಗರಗಳಿಂದ, ದಕ್ಷಿಣದ ತಮಿಳು ನಾಡಿನಿಂದ ಬಂದವರೂ ಇಲ್ಲಿ ಆಸರೆ ಪಡೆದಿದ್ದಾರೆ.
2012ರಲ್ಲಿ ವೃದ್ಧಾಶ್ರಮದ ಮೊದಲ ಮಹಡಿಯಲ್ಲಿ ವೃದ್ಧರಿಗೆ, ಮಾನ ಸಿಕ ಖನ್ನತೆಯುಳ್ಳ ಯುವಕರಿಗೆ ಸಹಿತ 34 ಮಂದಿಗೆ ಆಸರೆ ಕಲ್ಪಿಸಲಾಯಿತು. ಪ್ರಾರಂಭದಲ್ಲಿ ಅನಾಥ ಮಕ್ಕಳನ್ನು ಸಲಹುತ್ತಿದ್ದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಆ ಮಕ್ಕಳನ್ನು ಇತರ ಅನಾಥಾಶ್ರಮಗಳಿಗೆ ವರ್ಗಾಯಿಸಲಾಯಿತು.ಈಗ ಅಂದಾಜು 58 ಲಕ್ಷ ರೂ. ವೆಚ್ಚದಲ್ಲಿ ಈಗಿನ ಕಟ್ಟಡಕ್ಕೆ ಹೊಂದಿಕೊಂಡಂತೆ 756.16 ಚ.ಮೀಟರ್ ವಿಸ್ತೀರ್ಣದ ಕಟ್ಟಡದ ಯೋಜನೆ ಹಾಕಿಕೊಳ್ಳಲಾಗಿದೆ. ಇದರ ಭೂಮಿ ಪೂಜೆ ಈಗಾಗಲೇ ನಡೆದಿದೆ. ಹಬೆಯಿಂದ ಕಾರ್ಯಾಚರಿಸುವ ಅಡುಗೆ ಯಂತ್ರಕ್ಕೆ 1.75 ಲಕ್ಷ ರೂ. ತಗಲುವುದಾಗಿ ಡಾ| ಉದಯ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕದ ಜಬ್ಯ ಎಂಬಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ಗೋ ಶಾಲೆಯೊಂದನ್ನು ಹುಟ್ಟು ಹಾಕುವ ಯೋಜನೆ ಸೇವಾ ಪ್ರತಿಷ್ಠಾನಕ್ಕಿದೆ. ಒಟ್ಟು 14 ಜನ ಉದ್ಯೋಗಿಗಳು ಇಲ್ಲಿ ಕಾರ್ಯನಿರತರಾಗಿದ್ದಾರೆ. ಮಾಸಿಕ ರೂ.2.5 ಲಕ್ಷ ಸಂಸ್ಥೆಯನ್ನು ನಡೆಸಲು ವೆಚ್ಚ ತಗಲುತ್ತದೆ. ತಮ್ಮ ವೈದ್ಯ ವೃತ್ತಿಯಿಂದ ದೊರೆಯುವ ಆದಾಯದ ಸಿಂಹಪಾಲನ್ನು ಈ ವೈದ್ಯ ದಂಪತಿ ಸೇವಾನಿಕೇತದ ವೆಚ್ಚ ಸರಿದೂಗಿಸಲು ಹೂಡುತ್ತಾರೆ.
ಇನ್ನುಳಿದಂತೆ ಸ್ಥಳೀಯ, ಪರವೂರ ಉದಾನ ದಾನಿಗಳ ನೆರವು ನಿಯಮಿತವಾಗಿ ಇಲ್ಲದಿದ್ದರೂ ಕಾಲಾನುಕಾಲಕ್ಕೆ ಒದಗಿಬರುತ್ತದೆ. ಆದರೆ ಖರ್ಚು ವೆಚ್ಚ ತೂಗಿಸಿಕೊಂಡು ಹೋಗಲು ದುಸ್ತರ ವೆನಿಸಿದ್ದು ಉಂಟು ಅನ್ನುತ್ತಾರೆ ಈ ವೈದ್ಯ ದಂಪತಿ. ಏಕೈಕ ಸಂತಾನವಾದ ಪುತ್ರ ಶ್ರೀವತ್ಸ ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದು ಹೆತ್ತವರ ತ್ತಾರೆ. ಮಾತ್ರವಲ್ಲ ತನ್ನ ಸಹೋದ್ಯೋಗಿ, ಮಿತ್ರರಿಂದಲೂ ದೇಣಿಗೆ ಸಂಗ್ರಹಿಸುತ್ತಾರೆ.
– ನರಸಿಂಗ ರಾವ್